ಸಿಎಂ ಬಿಎಸ್ ವೈ ಬೆಂಗಾವಲು ವಾಹನ ಅಪಘಾತ: ಚಾಲಕನಿಗೆ ಗಾಯ….

Promotion

ಬೆಂಗಳೂರು,ಡಿ,31,2019(www.justkannada.in):  ಸಿಎಂ ಬಿಎಸ್ ಯಡಿಯೂರಪ್ಪ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾಗಿ ಬೆಂಗಾವಲು ವಾಹನದ ಚಾಲಕ ಗಾಯಗೊಂಡಿರುವ ಘಟನೆ ಇಂದು ನಡೆದಿದೆ.

ಬೆಂಗಳೂರಿನ ಯಶವಂತಪುರ ಫ್ಲೈಓವರ್ ಮೇಲೆ ಈ ಘಟನೆ ನಡೆದಿದೆ. ಸಿಎಂ ಬಿಎಸ್ ವೈ ಬೆಂಗಾವಲು ವಾಹನ ಚಾಲಕ ವಿನಯ್ ಗೆ ಗಾಯವಾಗಿದೆ. ಜನವರಿ 2 ರಂದು ಪ್ರಧಾನಿ ಮೋದಿ ತುಮಕೂರಿಗೆ ಭೇಟಿ ನೀಡಿಲಿದ್ದು ಈ ಹಿನ್ನೆಲೆ ಪರಿಶೀಲನೆ ನಡೆಸಲು ಸಿಎಂ ಬಿಎಸ್ ಯಡಿಯೂರಪ್ಪ ತುಮಕೂರಿಗೆ ತೆರಳುತ್ತಿದ್ದರು. ಈ ವೇಳೆ ಸಿಎಂ ಬಿಎಸ್ ಯಡಿಯೂರಪ್ಪ ಕಾರಿನ ಹಿಂಭಾಗವಿದ್ದ ಬೆಂಗಾವಲು ವಾಹನ ಲಾರಿಗೆ ಡಿಕ್ಕಿಯಾಗಿದೆ.

ಬೆಂಗಾವಲು ವಾಹನ ಡಿವೈಡರ್ ದಾಟಿ  ಕ್ಯಾಂಟರ್ ಗೆ ಡಿಕ್ಕಿ ಹೊಡೆದು ನಂತರ ಆಟೋಗೆ ಡಿಕ್ಕಿಯಾಗಿದೆ. ಇದರಿಂದಾಗಿ ಬೆಂಗಾವಲು ವಾಹನ ಚಾಲಕ ವಿನಯ್ ಗಾಯಗಳಾಗಿದೆ. ಇನ್ನು ಆಟೋ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರಿನಲ್ಲಿ ಸಿಎಂ ಕಾರ್ಯದರ್ಶಿ ಸೆಲ್ವಕುಮಾರ್ ಇದ್ದರು. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: Bangalore- CM BS Yeddyurappa- escort vehicle- accident-Injury – driver