ಸರೋವರ ಪುನರುಜ್ಜೀವನ ಯೋಜನೆಗೆ ಬೆಂಗಳೂರು ಹುಡುಗನ ಮಾಸ್ಟರ್ ಪ್ಲಾನ್ : ನ್ಯೂಯರ್ಕ್ ಯುಎನ್ ಕಚೇರಿಯಲ್ಲಿ ಪ್ರಸ್ತುತಿಪಡಿಸಲು ಸಜ್ಜು…

Promotion

ಬೆಂಗಳೂರು,ಫೆ,5,2020(www.justkannada.in):  ನಗರದ ವಿದ್ಯಾ ಶಿಲ್ಪ ಅಕಾಡೆಮಿಯ 8ನೇ ತರಗತಿ ವಿದ್ಯಾರ್ಥಿ, ಸರೋವರ ಪುನರುಜ್ಜೀವನ ಯೋಜನೆಯನ್ನು ಹೆಚ್ಚಿಸಲು ಮಾಸ್ಟರ್ ಪ್ಲಾನ್ ರೂಪಿಸಿದ್ದಾನೆ. ಮಾಸ್ಟರ್ ತನುಷ್ ಗೌಡ ರೂಪಿಸಿದ ಇಂತಹ ಯೋಜನೆಯ ಪ್ಲಾನ್ ಅನ್ನು ಜನವರಿ 31ರಿಂದ ಫೆಬ್ರವರಿ 1, 2020ರ ವರೆಗೆ ತನ್ನ ಸಮಗ್ರ ವರದಿಯನ್ನು ನ್ಯೂಯಾರ್ಕ್ ಯುಎನ್ ಪ್ರಧಾನ ಕಚೇರಿಯಲ್ಲಿ ಪ್ರಸ್ತುತಿ ಪಡಿಸಲಿದ್ದಾನೆ.

ಹೌದು.. ನಗರೀಕರಣವು ಬೆಂಗಳೂರಿನ ಸರೋವರಗಳ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರಿದೆ. ಒಂದು ಅಧ್ಯಯನದ ಪ್ರಕಾರ ನಗರದ ಜಲಮೂಲಗಳು, 1973ರಲ್ಲಿ ಶೇ.3.40ರಿಂದ 2005ರಲ್ಲಿ ಕೇಲವ 1.47ಕ್ಕೆ ಇಳಿದಿದೆ. ಸರೋವರದ ಸ್ಥಳಗಳು ನಿರ್ಮಿತ ಪ್ರದೇಶಗಳಾಗಿ ಮಾರ್ಪಟ್ಟಿರುವುದರಿಂದ ಮಳೆ ಕಡಿಮೆಯಾಗಿ, ಪಕ್ಷಿಗಳು, ಅಭಯಾರಣ್ಯಗಳು ಸಹ ವಿನಾಶದ ಅಂಚನ್ನು ತಲುಪಿವೆ.

ಈ ಉಪ ಕ್ರಮವು ವರ್ಲ್ಡ್ ಫೆಡರೇಶನ್ ಆಫ್ ಯುನಿಟೆಡ್ ನೇಷನ್(WFUNA) ಮಿಷನ್ ಸಂಭಾವ್ಯ ಯೋಜನೆಯ ಒಂದು ಭಾಗವಾಗಿದ್ದು, ಇದು 17 ಸುಸ್ಥಿರ ಅಭಿವೃದ್ಧಿ ಗುರಿಗಳು(ಎಸ್ ಡಿ ಜಿ) ಅಡಿಯಲ್ಲಿ ಸಮುದಾಯಗಳಿಗೆ ಸಹಾಯ ಮತ್ತು ಬೆಂಬಲ ನೀಡುವತ್ತ ಗಮನ ಹರಿಸುತ್ತದೆ. ತರಬನಗಳ್ಳಿ ಸರೋವರದ ನೀರಿನಲ್ಲಿ ಸೇರಿರುವ ಕಸ ಮತ್ತು ತ್ಯಾಜ್ಯವನ್ನು ತೆಗೆದುಹಾಕಿ, ಅವುಗಳನ್ನು ಮಾಲಿನ್ಯ ರಹಿತವಾಗಿ ನಂತ್ರ, ಅನಗತ್ಯ ಸಸ್ಯವರ್ಗವನ್ನು ತೆರಲುಗೊಳಿಸಿ, ಹೂಗಳನ್ನು ತೆಗೆದು ಸ್ವಚ್ಛಗೊಳಿ, ನೀರಾವರಿಗೆ ಯೋಗ್ಯವಾಗುವ ರೀತಿ ಹೊಸ ದ್ವಾರಗಳನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ.

ತರಬನಹಳ್ಳಿ ಬೆಂಗಳೂರಿನ ದೇವನಹಳ್ಳಿ ತಾಲೂಕಿನಲ್ಲಿರುವ ಒಂದು ಸಣ್ಣ ಹಳ್ಳಿ. ಈ ನಿರ್ದಿಷ್ಟ ಗ್ರಾಮವು ಬರಗಾಲ ಮತ್ತು ಕೆಟ್ಟ ಅಂತರ್ಜಲ ಕೋಷ್ಟಕದಿಂದಾಗಿ ತನ್ನ ಕೃಷಿ ಉತ್ಪನ್ನಗಳನ್ನು ಕಡಿಮೆ ಮಾಡಿದೆ. ಈ ಊರಿನ ಸರೋವರವು ಹೂಳು ಮತ್ತು ಅನಗತ್ಯ ಸಸ್ಯ ವರ್ಗದಿಂದಾಗಿ ಕೆರೆಯ ನೀರು ನಿರಾವರಿ ಸ್ಥಳವನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಅದ್ದರಿಂದ ನಾವು ನೀರಾವರಿಗೆ ಯೋಗ್ಯವಾದ ರೀತಿಯಲ್ಲಿ ಮತ್ತು ಜೀವಿಗಳಿಗೆ ತಾಜಾ ಆವಾಸ ಸ್ಥಾನವನ್ನು ಸೃಷ್ಠಿಸುವುದು ಮುಖ್ಯಕಾರಣ.

ತನುಷ್ ಗೌಡರವರು ಇದನ್ನು ಹೇಗೆ ಮಾಡಬಲ್ಲೆ ಎಂಬುದರ ಕುರಿತು ಮಾತನಾಡುತ್ತಾ, ಸರೋವರಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿ, ಸ್ಥಳೀಯ ಸಮುದಾಯದ ಸದಸ್ಯರನ್ನು ಸಜ್ಜುಗೊಳಿಸಿ, ಮುಖ್ಯವಾಗಿ ಎನ್ ಜಿ ಓ ಸೇವಿಯರ್ಸ್ ಆಪ್ ಸೋಲ್ಸ್ ನ ಸಂಸ್ಥಾಪಕರಾದ ಆರತಿ ಲೂಸಿಯಾನಾ, ಗುತ್ತಿಗೆದಾರರಾದ ಸೋಮು ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಶ್ರೀರಾಮ್ ಅವರು, ಕಾರ್ಲೆ ಗ್ರೂಪ್, ಎಚ್ ಎಂ ಜಿ ಮಾರ್ಬಲ್ಸ್, ಕಾರ್ಪೊರೇಟರ್ ಗಳು, ಡಿಎಸ್ ಮ್ಯಾಕ್ಸ್, ಸದರನ್ ಸ್ಟಾರ್, ಇಂಡಸ್ ಗ್ರೂಪ್ ಮತ್ತು ಗಾರ್ಡನ್ ಸಿಟಿ ರಿಯಾಲಿಟಿ ಪ್ರೈವೇಟ್ ಲಿಮಿಟೆಡ್ ಇವರುಗಳು 12 ಲಕ್ಷ ಸಿ ಎಸ್ ಆರ್ ಹಣವನ್ನು ಚಟುವಟಿಕೆಗಳನ್ನು ಕೈಗೊಳ್ಳಲು ನೀಡಿರುತ್ತಾರೆ.

ತರಬನಹಳ್ಳಿ ಸರೋವರವು 53 ಎಕರೆ ವಿಸ್ತೀರ್ಣವಿದೆ. ಅದರಲ್ಲಿ ಮಾಸ್ಟರ್ ತನುಷ್ ಗೌಡ, ಸರೋವರದ ಪುನರುಜ್ಜೀವನಕ್ಕಾಗಿ ಪ್ರಸಿದ್ಧ ಸಂಸ್ಥೆಯಾದ ಐಟಿಸಿಯವರ ಸಹಯೋಗದೊಂದಿಗೆ ಕೈಜೋಡಿಸಿ, ಕೈಗೆತ್ತಿಕೊಳ್ಳಲು ಸಿದ್ಧರಾಗಿದ್ದಾರೆ. ಇದಕ್ಕೆ ಸ್ಥಳೀಯ ಸಂಸ್ಥೆಗಳು, ಕಾರ್ಪೊರೇಟರ್ ಗಳು ಮತ್ತು ನಾಗರೀಕರನ್ನು ಒಟ್ಟುಗೂಡಿಸಿ ಸ್ಥಳೀಯ ಸರೋವರಗಳನ್ನು ಪುನರುಜ್ಜೀವನಗೊಳಿಸಿ ಗುಣಮಟ್ಟವನ್ನು ಸುಧಾರಿಸುವುದು ಮುಖ್ಯ ಉದ್ದೇಶ

ಉಳಿದ ಭೂಮಿಯನ್ನು ಉದ್ಯಾನವನವನ್ನಾಗಿ ಪರಿವರ್ತನೆ ಮಾಡುವುದು. ಈ ವಿಷಯವಾಗಿ ಜನವರಿ 31ರಿಂದ ಫೆಬ್ರವರಿ 10, 2020ರ ವರೆಗೆ ನ್ಯೂಯಾರ್ಕ್ ನ ಯು ಎನ್ ಪ್ರಧಾನ ಕಚೇರಿಯಲ್ಲಿ ತನುಷ್ ಗೌಡರ ಯೋಜನೆಯ ಬಗ್ಗೆ ಪ್ರಸ್ತುತಿಯನ್ನು ಪಡಿಸಲಿದ್ದಾರೆ.

ಬೆಂಗಳೂರಿನ ಎಲ್ಲಾ ಸರೋವರಗಳು ಪರಸ್ಪರ ಸಂಬಂಧ ಹೊಂದಿದ್ದು, ಸಂವಾದಾತ್ಮಕವಾಗಿರುವುದರಿಂದ ತರಬನಹಳ್ಳಿ ಸರೋವರವನ್ನು ಮಾತ್ರ ಪುನರುಜ್ಜೀವನ ಮಾಡಿದರೆ ಸಾಕಾಗುವುದಿಲ್ಲ. ಈ ಪುನರುಜ್ಜೀವನ ಕಾರ್ಯಕ್ಕೆ ಎಲ್ಲಾ ಹಂತದ ಸಂಘಟನೆಗಳಿಂದ ಸಕ್ರಿಯ ಪಾಲ್ಗೊಳ್ಳುವಿಕೆಯೊಂದಿಗೆ ಕ್ರಮ ಬದ್ಧ ಯೋಜನೆ ನಾಯಕತ್ವ ಹಾಗೂ ಹಣದ ಅಗತ್ಯವಿರುತ್ತದೆ. ಸರೋವರಗಳು ದೀರ್ಘಕಾಲದ ಜನಮೂಲಗಳು ಆಗಿವೆ. ಮಾನವ ಪ್ರಾಣಿ ಮತ್ತು ಎಲ್ಲಾ ಸಸ್ಯ ಜೀವನವು ಉಳಿಯಬೇಕಾದರೇ, ಸರೋವರಗಳು ಬಹುಕುಳಿಯಬೇಕು. ಮಾನವ ಹಸ್ತಕ್ಷೇಪಗಳು ದೀರ್ಘಕಾಲದ ಸರೋವರಗಳ ಮೇಲೆ ದಾಳಿ ನಿಲ್ಲಬೇಕು ಎಂಬುದು ವಿದ್ಯಾರ್ಥಿ ತನುಷ್ ಗೌಡ ಅಶಯವಾಗಿದೆ.

Key words: Bangalore –boy-  lake revitalization-project-present – UN office – New York