ಲಾಕ್ ಡೌನ್ ವೇಳೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರ ಬಂಧನ.

Promotion

ಬೆಂಗಳೂರು,ಜೂನ್,5,2021(www.justkannada.in): ನಗರದ ಎಲೆಕ್ಟ್ರಾನ್ ಸಿಟಿ, ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಲಾಕ್ ಡೌನ್ ವೇಳೆ ಅಕ್ರಮವಾಗಿ ಮದ್ಯ ಮಾರುತ್ತಿದ್ದವರನ್ನ ಪೊಲೀಸರು ಬಂಧಿಸಿದ್ದಾರೆ.jk

ದೊಡ್ಡತೋಗೂರಿನ ಬಾರ್ ನಿಂದ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಚಾಲಕ ವೇಲು(27)ನನ್ನ ಎಲೆಕ್ಟ್ರಾನ್ ಸಿಟಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ 198 ಲೀಟರ್ ಮದ್ಯವನ್ನ ವಶಕ್ಕೆ ಪಡೆಯಲಾಗಿದೆ. 23 ಮದ್ಯದ ಬಾಕ್ಸ್ , ವಾಹನ ಮತ್ತು ಮೊಬೈಲ್ ವಶಕ್ಕೆ ಪಡೆಯಲಾಗಿದೆ.

ಮತ್ತೊಂದೆಡೆ 200 ಲೀಟರ್ ಮದ್ಯ ಮತ್ತು ಕಟೇನರ್ ಅನ್ನ ವಶಕ್ಕೆ ಪಡೆಯಲಾಗಿದ್ದು ಮದ್ಯ ಮಾರಾಟದಲ್ಲಿ ತೊಡಗಿದ್ದ ಕುಮಾರ್, ಬಾಲಾಜಿ, ಸುಂದರ್ ಮೂರ್ತಿ, ರಾಜೇಶ್, ಜಗನ್ ಎಂಬುವವರನ್ನ ಬಂಧಿಸಲಾಗಿದೆ. ಎಲೆಕ್ಟ್ರಾನ್ ಸಿಟಿ, ಬೇಗೂರು ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣ ದಾಖಲಾಗಿದೆ.

Key words: Bangalore-arrest-liquor- dealers – lockdown.