ಅರಣ್ಯ ಇಲಾಖೆ ಸಿಬ್ಬಂದಿಗಳ ಕಾರ್ಯಾಚರಣೆ: ಹುಲಿಗಳ ಸೆರೆ…

kannada t-shirts

ಮೈಸೂರು,ಸೆಪ್ಟಂಬರ್, 8,2020(www.justkannada.in): ಬಂಡೀಪುರ ವ್ಯಾಪ್ತಿಗೆ ಬರುವ ಎನ್ .ಬೇಗೂರು ರೇಂಜ್ ದೇವಲಾಪುರ ಹುಂಡಿಯಲ್ಲಿ  ಸುಮಾರು ಎಂಟು ವರ್ಷದ ಗಂಡು ಹುಲಿ  ಆನೆಗಳ ಸಹಾಯದಿಂದ ಅರವಳಿಕೆ ಚುಚ್ಚು ಮದ್ದಿನಿಂದ ಹುಲಿಯನ್ನು ಸೆರೆ ಹಿಡಿಯಲಾಗಿದೆ.Bandipur- saragur- forest-staff-tiger

ಇನ್ನೊಂದೆಡೆ ಮೈಸೂರು ಜಿಲ್ಲೆ ಹೆಚ್. ಡಿ. ಕೋಟೆ ಕಾಡಂಚಿನ ಗ್ರಾಮಗಳಲ್ಲಿ ಪ್ರತ್ಯಕ್ಷಗೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಹುಲಿಯನ್ನ ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಹಿಡಿದಿದ್ದಾರೆ. ಹೆಚ್. ಡಿ. ಕೋಟೆ ಸರಗೂರು ತಾಲ್ಲೂಕಿನ ಹೆಗ್ಗನೂರು ಆಸುಪಾಸಿನಲ್ಲಿ  ಹುಲಿ ಕಾಣಿಸಿಕೊಂಡು ಸಾಕುಪ್ರಾಣಿಗಳನ್ನ ಕೊಂದು ಜನರಲ್ಲಿ ಆತಂಕ ಸೃಷ್ಠಿಸಿತ್ತು.

ಅರಣ್ಯ ಇಲಾಖೆ ಸಿಬ್ಬಂದಿಗಳು ಹುಲಿ ಸೆರೆಗೆ ಸಾಕಾನೆ ಬಳಸಿಕೊಂಡು ಮುಂಜಾನೆಯಿಂದ ಕಾರ್ಯಾಚರಣೆ ಆರಂಭಿಸಿದ್ದರು. ಈ ನಡೆವೆ ಸರಗೂರು ದೇವಲಾಪುರ ಹುಂಡಿ ಬಳಿ ಕಾರ್ಯಾಚರಣೆ ವೇಳೆ ಹುಲಿ ಪತ್ತೆಯಾಗಿದ್ದು  ಈ ವೇಳೆ ಅರವಳಿಕೆ ತಜ್ಣರ ಸಹಾಯದಿಂದ ಹುಲಿಯನ್ನು ಸೆರೆ ಹಿಡಿಯಲಾಗಿದೆ.Bandipur- saragur- forest-staff-tiger

ಸುಮಾರು 10 ವರ್ಷದ ಗಂಡು ಹುಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಅಶಕ್ತವಾಗಿ ನಾಡಿನತ್ತ ಆಗಮಿಸಿತ್ತು. ಇನ್ನು ಸೆರೆ ಹಿಡಿದ ಹುಲಿಯನ್ನು ನೋಡಲು ಜನರು ಆಗಮಿಸಿದ್ದರು. ಜನರ ನಿಯಂತ್ರಣಕ್ಕೆ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಹರಸಾಹಸ ಪಟ್ಟ ಘಟನೆ ನಡೆಯಿತು.

Key words:  Bandipur- saragur- forest-staff-tiger

website developers in mysore