ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಬಳ್ಳಾರಿ ಬಂದ್:  ವ್ಯಾಪಾರ ವಹಿವಾಟು ಸ್ಥಗಿತ.

ಬಳ್ಳಾರಿ,ಜುಲೈ,4,2022(www.justkannada.in):  ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು ಕರ್ನಾಟಕದಲ್ಲೂ  ಆಕ್ರೋಶ ವ್ಯಕ್ತವಾಗಿದೆ. ಈ ಮಧ್ಯೆ ಕನ್ಹಯ್ಯಾರ ಭೀಕರ ಹತ್ಯೆ ಖಂಡಿಸಿ ವಿವಿಧ ಹಿಂದೂ  ಪರ ಸಂಘಟನೆಗಳು ಇಂದು ಬಳ್ಳಾರಿ ಬಂದ್​​ ಗೆ ಕರೆ ನೀಡಿವೆ.

ದೇಶಭಕ್ತಿ ನಾಗರಿಕ ವೇದಿಕೆ, ಹಿಂದೂ ಸಂಘಟನೆಗಳಿಂದ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಜಿಲ್ಲೆ ಬಂದ್​ಗೆ ಕರೆ ನೀಡಲಾಗಿದ್ದು, ಈಗಾಗಲೇ ಪ್ರತಿಭಟನೆಗಳು ನಡೆಯುತ್ತಿವೆ.  ಬಂದ್​ಗೆ ಥಿಯೇಟ್ ಮಾಲೀಕರು, ವ್ಯಾಪಾರಸ್ಥರು, ಆಟೋ ಚಾಲಕರು ಬೆಂಬl ಸೂಚಿಸಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡೆಸಿದ್ದಾರೆ.government-new-guideline-confusion-14-day-bandh

ಅಂಗಡಿ ಮುಂಗಟ್ಟು ಮುಚ್ಚಿ ಪ್ರತಿಭಟನೆ ನಡೆಸಲಾಗುತ್ತಿದ್ದು,  ಸಾವಿರಾರು ಹಿಂದೂ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆ ಕೂಗಿ ಬೈಕ್ ರ್ಯಾಲಿ ನಡೆಸುತ್ತಿದ್ದಾರೆ.  ಬಂದ್​ ಕರೆಗೆ ಬೆಂಬಲ ಸೂಚಿಸುವಂತೆ ವ್ಯಾಪಾರ ವಹಿವಾಟು, ಸಿನಿ ಪ್ರದರ್ಶಕರು, ಆಟೋ ಚಾಲಕರು, ಬಸ್ ಮಾಲೀಕರು, ಲಾರಿ ಮಾಲೀಕರು, ಸೇರಿದಂತೆ ವಾಣಿಜ್ಯ ವಹಿವಾಟು, ಸಾರಿಗೆ ಸಂಪರ್ಕ ಸ್ಥಗಿತಕ್ಕೆ ಪ್ರತಿಭಟನಾಕಾರರು ಮನವಿ ಮಾಡಿದ್ದರು. ಅದರಂತೆ ಥಿಯೇಟ್ ಮಾಲೀಕರು, ವ್ಯಾಪಾರಸ್ಥರು, ಆಟೋ ಚಾಲಕರು ಸೂಚಿಸಿದ್ದಾರೆ.

Key words: Bandh – Bellary – condemn –murder- Kanhayalal.