ದಸರಾ ಪ್ರವಾಸಿಗರಿಗೆ ಕಿರಿಕಿರಿ ಉಂಟು ಮಾಡುತ್ತಿರುವ ತುತ್ತೂರಿ ( vuvuzela ) ನಿಷೇಧ : ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ

Promotion

ಮೈಸೂರು, ಅ.14, 2021 : (www.justkannada.in news) : ಅರಮನೆಯ ಸುತ್ತ ಮುತ್ತ ದಸರಾ ದೀಪಾಲಂಕಾರ ವೀಕ್ಷಣೆಗೆಂದು ಬರುವ ಪ್ರವಾಸಿಗರಿಗೆ ಹಾಗೂ ಜನತೆಗೆ ಪುಂಡ ಪೋಕರಿಗಳಿಂದ ಕಿರಿಕಿರಿ ಉಂಟು‌ ಮಾಡುತ್ತಿರುವ ತುತ್ತೂರಿ ( vuvuzela – ವುವುಝೆಲಾ) ನಿಷೇಧಕ್ಕೆ ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ನವರಾತ್ರಿ ಕಾರಣ ದೇಶದ ನಾನಾ ಭಾಗಗಳಿಂದ ಪ್ರವಾಸಿಗರು ಮೈಸೂರಿಗೆ ಲಗ್ಗೆ ಹಾಕಿದ್ದಾರೆ. ಪ್ರಮುಖವಾಗಿ ವಿಶ್ವವಿಖ್ಯಾತ ಮೈಸೂರು ಅರಮನೆ ಹಾಗೂ ನಗರದ ದೀಪಾಲಂಕಾರ ಕಣ್ತುಂಬಿಕೊಳ್ಳುವ ಸಲುವಾಗಿ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸಂಜೆ ಹಾಗೂ ರಾತ್ರಿ ವೇಳೆ ಸೇರುತ್ತಿದ್ದಾರೆ.
ಇದೇ ವೇಳೆ ಫುಟ್ ಪಾತ್ ಗಳಲ್ಲಿನ ಕೆಲ ವ್ಯಾಪಾರಸ್ತರು ತುತ್ತೂರಿ ( vuvuzela – ವುವುಝೆಲಾ) ಮಾರಾಟ ಮಾಡುತ್ತಿರುವುದು ಈಗ ಸಮಸ್ಯೆಗೆ ಕಾರಣವಾಗಿದೆ. ಅತ್ಯಂತ ಕರ್ಕಷವಾಗಿ ಶಬ್ಧ ಹೊರ ಸೂಸುವ ತುತ್ತೂರಿ ( vuvuzela – ವುವುಝೆಲಾ) ಬಳಕೆಗೆ ಪಡ್ಡೆ ಹುಡುಗರು ಮುಂದಾಗಿದ್ದು, ಪ್ರವಾಸಿಗರಿಗೆ ಕಿರಿಕಿರಿ ಉಂಟುಮಾಡುತ್ತಿದೆ.Traffic – Mysore-police-Siege - 300 vehicles
ಅಗ್ಗದ ದರದಲ್ಲಿ ತುತ್ತೂರಿ ( vuvuzela – ವುವುಝೆಲಾ) ಮಾರಾಟವಾಗುತ್ತಿದ್ದು, ಇದು ಪುಂಡುಪೋಕರಿಗಳಿಗೆ ವರದಾನವಾಗಿದೆ. ಸಿಕ್ಕಸಿಕ್ಕಲೆಲ್ಲಾ ಇದರ ಕರ್ಕಷ ಧ್ಬನಿಯನ್ನು ಹೊಮ್ಮಿಸುತ್ತ, ದಸರಾ ಲೈಟಿಂಗ್ಸ್ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಕಿರಿಕಿರಿ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ, ಅವರ ವಿರುದ್ಧವೇ ಗುಂಪುಗೂಡಿ ಜಗಳಕ್ಕೆ ಮುಂದಾಗುತ್ತಿರುವ ಘಟನೆಗಳು ಸಹ ನಡೆದಿದೆ. ಈ ಹಿನ್ನೆಲೆಯಲ್ಲಿ ತುತ್ತೂರಿ ( vuvuzela – ವುವುಝೆಲಾ) ನಿಷೇಧಿಸಲು ನಗರ ಪೊಲೀಸರು ಮುಂದಾಗಿದ್ದಾರೆ.
ಈ ಬಗ್ಗೆ ಜಸ್ಟ್ ಕನ್ನಡ ಜತೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು ಹೇಳಿದಿಷ್ಟು…
ಸಾರ್ವಜನಿಕರಿಗೆ ಕಿರಿಕಿರಿಯನ್ನು ಉಂಟು ಮಾಡುತ್ತಿರುವ ಬಗ್ಗೆ ಇಲಾಖೆಗೂ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಇದರ ನಿಯಂತ್ರಣಕ್ಕೆ ಮುಂದಾಗಿದ್ದೇವೆ. ರಸ್ತೆ ಬದಿ ವ್ಯಾಪಾರಿಗಳಿಗೆ ತುತ್ತೂರಿ ( vuvuzela – ವುವುಝೆಲಾ) ಮಾರದಂತೆ ತಾಕೀತು ಮಾಡಿಸಲಾಗುತ್ತದೆ. ಇದನ್ನು ಮೀರಿ ಮಾರಾಟಕ್ಕೆ ಮುಂದಾದರೆ ಸೂಕ್ತ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಾರಾಟವನ್ನೇ ನಿಷೇಧಿಸಿದರೆ ಬಳಕೆ, ತಂತಾನೆ ನಿಯಂತ್ರಣಕ್ಕೆ ಬರುತ್ತದೆ. ಮುಂದಿನ ಒಂದೆರೆಡು ದಿನಗಳಲ್ಲಿ ಈ ಕರ್ಕಶ ಶಬ್ಧದ ಸಮಸ್ಯೆಗೆ ಇತ್ರಿಶ್ರೀ ಹಾಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದರು.

key words:  ban -Trumpet (vuvuzela)-mysore Dasara- tourists-City Police Commissioner- Dr Chandragupta