5 ವರ್ಷಗಳ ಕಾಲ PFI  ಮತ್ತು ಅದರ ಅಂಗ ಸಂಸ್ಥೆಗಳು ನಿಷೇಧ : ಕೇಂದ್ರ ಸರ್ಕಾರ ಘೋಷಣೆ.

ನವವದೆಹಲಿ,ಸೆಪ್ಟಂಬರ್,28,2022(www.justkannada.in):  ದೇಶಾದ್ಯಂತ ಪಿಎಫ್ ಐ  ಮತ್ತು ಅದರ ಅಂಗ ಸಂಸ್ಥೆಗಳನ್ನ 5 ವರ್ಷಗಳ ಕಾಲ ನಿಷೇಧಿಸಿ ಕೇಂದ್ರ ಸರ್ಕಾರ  ಮಹತ್ವದ ಆದೇಶ ಹೊರಡಿಸಿದೆ.

PFI ಜೊತೆಗೆ, ಅದರ ಅಂಗಸಂಸ್ಥೆಗಳಾದ ರಿಹ್ಯಾಬ್ ಇಂಡಿಯಾ ಫೌಂಡೇಶನ್, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್, ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರೆಹಬ್ ಫೌಂಡೇಶನ್ ಅನ್ನು ನಿಷೇಧಿಸಲಾಗಿದೆ.

ಕಾನೂನು ಬಾಹಿರ ಸಂಘಟನೆ ಎಂದು PFI ಮತ್ತು ಅದರ ಸಹವರ್ತಿಗಳು ಅಥವಾ ಅಂಗಸಂಸ್ಥೆಗಳನ್ನ ತಕ್ಷಣದಿಂದ ಜಾರಿಗೆ ಬರುವಂತೆ ಐದು ವರ್ಷಗಳ ಅವಧಿಗೆ ಬ್ಯಾನ್ ಮಾಡಲಾಗಿದೆ ಎಂದು ಸರ್ಕಾರ ಘೋಷಿಸಿದೆ.

ಇತ್ತೀಚೆಗೆ ರಾಜ್ಯ ಸೇರಿದಂತೆ ದೇಶಾದ್ಯಂತ ಪಿಎಫ್‌ಐ ಕಚೇರಿಗಳ ಮೇಲೆ ದಾಳಿ ಎನ್‌ಐಎ ದಾಳಿ ಮಾಡಿ  ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿತ್ತು. ಅಲ್ಲದೆ, ಸಂಘಟನೆಗೆ ಸೇರಿದ ಹಲವು ಮುಖಂಡರು, ಕಾರ್ಯಕರ್ತರನ್ನು ಬಂಧಿಸಿತ್ತು. ಈ ಬೆನ್ನಲ್ಲೆ ಇದೀಗ ಪಿಎಫ್ ಐ ಸಂಘಟನೆಯನ್ನ ನಿಷೇಧಿಸಿದೆ.

Key words: Ban -PFI – 5 years – Central Govt.