ಎಲ್ಲಾ ಸಂಘಟನೆಗಳನ್ನ  ಬ್ಯಾನ್ ಮಾಡಿ. ನಮ್ಮ ಬೆಂಬಲ ಇರುತ್ತೆ – ಮಾಜಿ ಸಚಿವ ಎಂ.ಬಿ ಪಾಟೀಲ್.

Promotion

ಬೆಂಗಳೂರು,ಸೆಪ್ಟಂಬರ್,22,2022(www.justkannada.in):  ದೇಶಾದ್ಯಂತ ಎಸ್ ಡಿಪಿಐ ಮತ್ತು ಪಿಎಫ್ ಐ ಕಚೇರಿ ಮೇಲೆ ಎನ್ ಐಎ ದಾಳಿ ವಿಚಾರ ಸಂಬಂಧ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ನಿಲುವು ಯಾವಾಗಲೂ ಒಂದೇ ಆಗಿದೆ.  ಕಾಲ ಕಾಲಕ್ಕೆ ಪಕ್ಷದ ನಿಲುವು ಬದಲಾಗುವುದಿಲ್ಲ. ಬಜರಂಗ ದಳ,  ಪಿಎಫ್ ಐ ಎಸ್ ಡಿ ಯಾವುದೇ ಸಂಘಟನೆ ಇರಲಿ ಸರ್ಕಾರ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಿ ಎಂದರು.

ಇಂತಹ ಸಂಘಟನೆ ಬ್ಯಾನ್ ಮಾಡಿ ಎಂದು ನಾವೇ ಹೇಳಿದ್ದೇವೆ.  ಅದರೆ ಸಂಘಟನೆ ಬ್ಯಾನ್ ಮಾಡಲು ಅವರು ತಯಾರಿಲ್ಲ. ಎಲ್ಲಾ ಸಂಘಟನೆಗಳನ್ನ ಬ್ಯಾನ್ ಮಾಡಿ . ನಮ್ಮ ಬೆಂಬಲ ಇರುತ್ತೆ ಎಂದು ಎಂ.ಬಿ ಪಾಟೀಲ್ ಸಲಹೆ ನೀಡಿದರು.

Key words: Ban- all –organizations- Former minister- MB Patil.