ಜ.27 ರಂದು ಬಲಿಜ ಸಂಕಲ್ಪ ಸಭೆ: ನಮಗೆ ರಾಜಕೀಯ, ಉದ್ಯೋಗದಲ್ಲಿ ಮೀಸಲಾತಿ ಬೇಕು-ಹೆಚ್.ಎ ವೆಂಕಟೇಶ್ ಆಗ್ರಹ.

Promotion

ಮೈಸೂರು,ಜನವರಿ,24,2023(www.justkannada.in) : ರಾಜಕೀಯವಾಗಿ ಹಾಗೂ ಉದ್ಯೋಗದಲ್ಲಿ ಬಲಿಜ ಸಮುದಾಯಕ್ಕೆ ಮೀಸಲಾತಿ ಬೇಕು ಎಂದು ಕೆಪಿಸಿಸಿ ವಕ್ತಾರ  ಹಾಗೂ ಬಲಿಜ ಸಮುದಾಯದ ಗೌರವಾದ್ಯಕ್ಷ  ಹೆಚ್.ಎ ವೆಂಕಟೇಶ್ ಆಗ್ರಹಿಸಿದರು.

ಜನವರಿ 27 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬಲಿಜ ಸಂಕಲ್ಪ ಸಭೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಇಂದು ಸಭೆಯ ಕುರಿತು ಕೆಪಿಸಿಸಿ ವಕ್ತಾರ ವೆಂಕಟೇಶ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಈ ಹಿಂದೆ ಬಲಿಜ ಸಮಾಜ 2A ನಲ್ಲಿತ್ತು. ಆದರೆ ಈಗ 3A ಗೆ ಸೇರಿಸಿ ಮೀಸಲಾತಿ ಕಿತ್ತುಕೊಂಡಿದ್ದಾರೆ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಜಾರಿಗೆ ತಂದವರು ಡಿ.ದೇವರಾಜ್ ಅರಸು ರವರು. ಅರಸು ರವರ ದೂರಾಲೋಚನೆಯಿಂದಲೇ ಎಲ್ಲರಿಗೂ‌ ಮೀಸಲಾತಿಯ ಅವಕಾಶ ಸಿಗುವಂತಾಗಿದೆ. ಮೀಸಲಾತಿಯ ಉದ್ದೇಶ ಹಿಂದುಳಿದವರ ಏಳಿಗೆಗೆ ಇರಬೇಕು. ಇತ್ತೀಚೆಗೆ ಸರ್ಕಾರದ ಆದೇಶಕ್ಕೆ ಮಾತ್ರ ಮೀಸಲಾತಿ‌ ಸೀಮಿತವಾಗಿದೆ. ವಿಧಾನ ಸಭೆಯಲ್ಲಿ ಚರ್ಚೆಯಾಗಿ ಶಿಫಾರಸ್ಸಾಗಬೇಕು ಎಂದು ಹೇಳಿದರು.

ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ಸಭೆಗೆ ಮುಖ್ಯಮಂತ್ರಿ ಬೊಮ್ಮಾಯಿಯವರು ಬಂದು ಬೇಡಿಕೆಯನ್ನು ಸ್ವೀಕರಿಸಬೇಕು ಎಂದು ಎಚ್.ಎ ವೆಂಕಟೇಶ್ ಒತ್ತಾಯಿಸಿದರು.

Key words: Balija- Sankalpa -meeting – Jan 27-H.A Venkatesh-mysore