ಯು ಟ್ಯೂಬ್ ನಲ್ಲಿ ದಾಖಲೆ ಬರೆದ ‘ಭಜರಂಗಿ 2’ ಟೀಸರ್: ಶಿವಣ್ಣನ ಲುಕ್ ಗೆ ಫ್ಯಾನ್ಸ್ ಫಿದಾ !

ಬೆಂಗಳೂರು, ಜುಲೈ 16, 2020 (www.justkannada.in): ‘ಭಜರಂಗಿ 2’ ಸಿನಿಮಾದ ಟೀಸರ್ ದಾಖಲೆಯ 1.8 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದು ದಾಖಲೆ ಸೃಷ್ಟಿಸಿದೆ.

ಕರ್ನಾಟಕದಲ್ಲಿ ಮಾತ್ರವಲ್ಲದೆ, ಹೊರ ರಾಜ್ಯ, ದೇಶಗಳಲ್ಲೂ ಭಜರಂಗಿ 2 ಮೇಕಿಂಗ್ ಬಗ್ಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಜತೆಗೆ ಟೀಸರ್ ನಲ್ಲಿ ಶಿವಣ್ಣನ ಲುಕ್, ಫೈಟಿಂಗ್ ದೃಶ್ಯ ನೋಡುಗರಲ್ಲಿ ಚಿತ್ರದ ಬಗ್ಗೆ ಭಾರೀ ಕುತೂಹಲ ಮೂಡಿಸಿದೆ.

ಅಭಿಮಾನಿಗಳು ಭಜರಂಗಿ 2 ಟೀಸರ್ ಗೆ ತೋರಿದ ಮೆಚ್ಚುಗೆ, ಪ್ರತಿಕ್ರಿಯೆಗೆ ಸ್ವತಃ ಶಿವಣ್ಣ ವಿಡಿಯೋ ಸಂದೇಶ ಮೂಲಕ ಥ್ಯಾಂಕ್ಸ್ ಹೇಳಿದ್ದಾರೆ. ಅಭಿಮಾನಿಗಳಿಗೆ ವಿಡಿಯೋ ಸಂದೇಶ ನೀಡಿದ ಶಿವಣ್ಣ ಲಾಕ್ ಡೌನ್ ಮುಗಿದ ಕೂಡಲೇ ಚಿತ್ರ ಬಿಡುಗಡೆಯಾಗಲಿದೆ ಎಂದಿದ್ದಾರೆ.