ಭಜರಂಗದಳದ ಕಾರ್ಯಕರ್ತ ಹರ್ಷ ಅಂತ್ಯಕ್ರಿಯೆ: ಸಚಿವ ಈಶ್ವರಪ್ಪ ಸೇರಿ ನೂರಾರು ಕಾರ್ಯಕರ್ತರು ಭಾಗಿ.

Promotion

ಶಿವಮೊಗ್ಗ,ಫೆಬ್ರವರಿ,21,2022(www.justkannada.in):  ನಿನ್ನೆ ತಡರಾತ್ರಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಭಜರಂಗದಳದ ಕಾರ್ಯಕರ್ತ ಹರ್ಷ ಅಂತ್ಯಕ್ರಿಯೆ ಇಂದು ಮರಾಠ ಸಂಪ್ರದಾಯದಂತೆ ನೆರವೇರಿತು.

ಶಿವಮೊಗ್ಗ ವಿದ್ಯಾನಗರದಲ್ಲಿರುವ ರೋಟರಿ ಚಿತಾಗಾರದಲ್ಲಿ  ಕಾಳಿ ಸ್ವಾಮೀಜಿ ನೇತೃತ್ವದಲ್ಲಿ ಹರ್ಷ ಅಂತ್ಯಕ್ರಿಯೆ ನೆರವೇರಿತು. ಹರ್ಷನ ಚಿತೆಗೆ ತಂದೆ ನಾಗರಾಜ್ ಅಗ್ನಿಸ್ಪರ್ಶ ಮಾಡಿದರು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ಅಲ್ಲಿ ನೆರೆದಿದ್ದ ನೂರಾರು ಕಾರ್ಯಕರ್ತರು ಜೈ ಶ್ರೀರಾಮ್, ಹರ್ಷ, ಭಾರತ್ ಮಾತಾಕೀ ಜೈ  ಎಂದು ಘೋಷಣೆ ಕೂಗಿದರು.

ಇನ್ನು ಅಂತ್ಯಕ್ರಿಯೆಯಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಬಿವೈ ರಾಘವೇಂದ್ರ ಸೇರಿ ಹಲವರು ಪಾಲ್ಗೊಂಡಿದ್ದರು.

Key words: Bajrang Dal- activist- Harsha- funeral.