ಇಂದು ಮೈಸೂರಿಗೆ ಭಜರಂಗಿ ಆಗಮನ..!

Promotion

ಮೈಸೂರು,ನವೆಂಬರ್,26,2021(www.justkannada.in):  ನಟ ಪುನೀತ್​ ರಾಜ್ ​ಕುಮಾರ್​ ಅವರನ್ನು ಕಳೆದುಕೊಂಡ ನೋವು ನಟ ಶಿವರಾಜ್ ​ಕುಮಾರ್​ ಅವರಿಗೆ ಇನ್ನಿಲ್ಲದ ರೀತಿ ಕಾಡುತ್ತಿದೆ. ಈ ಸಾವು ಅವರಿಗೆ ತೀವ್ರ ನೋವನ್ನು ತಂದಿದೆ. ಇದನ್ನು ಅರಗಿಸಿಕೊಳ್ಳೋಕೆ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಈ ನೋವಿನಲ್ಲೂ ನಟ ಶಿವಣ್ಣ  ಅಭಿಮಾನಿಗಳ ಜೊತೆ ಬೆರೆತು ಸಿನಿಮಾ ವೀಕ್ಷಣೆಗೆ ಮುಂದಾಗಿದ್ದಾರೆ.

ಹೌದು, ನಟ ಶಿವರಾಜ್ ಕುಮಾರ್ ಇಂದು ಅಭಿಮಾನಿಗಳ ಜತೆಯಲ್ಲೇ ಮೈಸೂರಿನಲ್ಲಿ ಭಜರಂಗಿ-2 ವೀಕ್ಷಿಸಲಿದ್ದಾರೆ. ಮೈಸೂರಿನ ಉಡ್ ಲ್ಯಾಂಡ್ ಚಿತ್ರಮಂದಿರಕ್ಕೆ ಭೇಟಿ ನೀಡಲಿರುವ ನಟ ಶಿವರಾಜ್ ಕುಮಾರ್ ಸಂಜೆ 4ಗಂಟೆ ಶೋನಲ್ಲಿ ಅಭಿಮಾನಿಗಳ ಜತೆ ಕುಳಿತು ಸಿನಿಮಾ ವೀಕ್ಷಣೆ ಮಾಡಲಿದ್ದಾರೆ.

ಸದ್ಯ ಶಿವರಾಜ್ ​​ಕುಮಾರ್​ ನಟನೆಯ ‘ಭಜರಂಗಿ 2’ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಜರಂಗಿ’, ‘ವಜ್ರಕಾಯ’ ನಂತರದಲ್ಲಿ ನಟ ಶಿವರಾಜ್ ​ಕುಮಾರ್​ ಹಾಗೂ ನಿರ್ದೇಶಕ ಎ. ಹರ್ಷ ‘ಭಜರಂಗಿ 2’ಗಾಗಿ ಮತ್ತೆ ಒಂದಾಗಿದ್ದರು. ಈ ಸಿನಿಮಾ ಮೂಲಕ ಹರ್ಷ ಪ್ರೇಕ್ಷಕರ ಎದುರು ಮತ್ತೊಂದು ಫ್ಯಾಂಟಸಿ ಜಗತ್ತನ್ನು ತೆರೆದಿಟ್ಟಿದ್ದರು. ಮಂತ್ರ-ತಂತ್ರ, ಧನ್ವಂತರಿ, ಪುನರ್ಜನ್ಮ ಹೀಗೆ ನಾನಾ ವಿಚಾರಗಳನ್ನು ಹೇಳುವುದರ ಜತೆಗೆ ಸಮಾಜಕ್ಕೆ ಒಂದೊಳ್ಳೆಯ ಸಂದೇಶ ರವಾನಿಸುವ ಪ್ರಯತ್ನ ಮಾಡಿದ್ದರು.

ಇನ್ನು ಈ ಸಿನಿಮಾ ರಿಲೀಸ್​ ಆದ ದಿನವೇ ನಟ ಪುನೀತ್ ರಾಜ್ ಕುಮಾರ್​ ನಿಧನ ಹೊಂದಿದ್ದರು. ಒಂದೆಡೆ ಸಿನಿಮಾ ರಿಲೀಸ್ ಖುಷಿಯಲ್ಲಿದ್ದ ಶಿವಣ್ಣ ಅಂದು ನಟಿ ಪುನೀತ್ ರಾಜ್ ಕುಮಾರ್ ಅವರ ಸಾವು ಬರಸಿಡಿಲಿನಂತೆ ಅಪ್ಪಳಿಸಿತ್ತು.

Key words: bajarangi-2- cinema-mysore- actor-shivarajkumar-fan