ಶ್ರೀಕಿಗೆ ಬೇಲ್ ಕೊಡಿಸಿದ್ದು ನಳೀನ್ ಕುಮಾರ್ ಕಟೀಲ್ ಆಪ್ತ: ಶ್ರೀಕಿ ಸಾಯಿಸಲು ಡ್ರಗ್ ಅಡಿಕ್ಟ್ ಮಾಡಲಾಗಿದೆ – ಎಂ. ಲಕ್ಷ್ಮಣ್ ಆರೋಪ.

kannada t-shirts

ಮೈಸೂರು,ನವೆಂಬರ್,13,2021(www.justkannada.in):  ಪ್ರಸಿದ್ಧ ಶೆಟ್ಟಿ ಎಂಬುವವನು ಶ್ರೀಕಿಗೆ ಬೆಲ್ ಕೊಡಿಸುತ್ತಾನೆ. ಪ್ರಸಿದ್ಧ್ ಶೆಟ್ಟಿ ನಳಿನ್ ಕುಮಾರ್ ಕಟೀಲ್ ಆಪ್ತ. ಈತ ಜನ್ ಧನ್ ಖಾತೆಯಿಂದ ಹಣ ಕದಿಯುತ್ತಾನೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್,  ಬಿಟ್ ಕಾಯಿನ್ ಡಿಜಿಟಲ್ ಕರೆನ್ಸಿ. ಒಂದು ಬಿಟ್ ಕಾಯಿನ್ ಬೆಲೆ 73 ಲಕ್ಷ. ಇದು ಅಭಿವೃದ್ಧಿ ಹೊಂದಿದ್ದ ದೇಶಗಳಲ್ಲಿ ಬಳಸುತ್ತಾರೆ. ನಮ್ಮ ದೇಶದಲ್ಲಿ ಇಲ್ ಲಿಗಲ್ ಆಗಿ ಕಂಡು ಬರುತ್ತಿದೆ. ನಾವು ಬಿಜೆಪಿಯವರ ತರ  ಹಿಟ್ ಅಂಡ್ ರನ್ ಕೆಲಸ ಮಾಡುವವರಲ್ಲ. ಈ ವಿಚಾರವನ್ನು ಕಾಂಗ್ರೆಸ್ ಪಕ್ಷ ಗಂಭೀರವಾಗಿ ತೆಗೆದುಕೊಂಡಿದೆ. ಶ್ರೀಕಿಯನ್ನ ಬಳಸಿಕೊಂಡು ಹಣ ಲಪಟಾಯಿಸಿರುವುದನ್ನ ಅವನೇ ಒಪ್ಪಿಕೊಂಡಿದ್ದಾನೆ. ನಲಪಾಡ್ ಕೇಸ್ ಆದ ನಂತರ ಶ್ರೀಕಿ ತಪ್ಪಿಸಿಕೊಳ್ಳುತ್ತಾನೆ. ನಂತರ ಬೆಲ್ ತೆಗೆದುಕೊಂಡು ಹೊರ ಬಂದ. ಪ್ರಸಿದ್ಧ ಶೆಟ್ಟಿ ಎಂಬುವವನು ಶ್ರೀಕಿಗೆ ಬೆಲ್ ಕೊಡಿಸುತ್ತಾನೆ. ಪ್ರಸಿದ್ಧ್ ಶೆಟ್ಟಿ ನಳಿನ್ ಕುಮಾರ್ ಕಟೀಲ್ ಆಪ್ತನಾಗಿದ್ದು, ಈತ ಜನ್ ಧನ್ ಖಾತೆಯಿಂದ ಹಣ ಕದಿಯುತ್ತಾನೆ. ಇದನ್ನು ಮಾಡಿಸಿದ್ದು ಬಿಜೆಪಿಯವರೇ ಇದನ್ನು ನಾನು ಹೇಳುತ್ತಿಲ್ಲ. ಅವನೇ ಬರೆದಿರುವ ಪತ್ರದಲ್ಲಿ ಇದೆಲ್ಲಾ ಇದೆ. ಇದೆಲ್ಲಾ ಜನಸಾಮಾನ್ಯರ ಹಣ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಖಾತೆಗಳಿಂದ ಹಣ ಲಪಟಾಯಿಸಿದ್ದಾರೆ. ರಾಜ್ಯ ಸರ್ಕಾರದ ಖಾತೆಗಳಿಂದ‌ 2 ಸಾವಿರ ಕೋಟಿ, ಕೇಂದ್ರ ಸರ್ಕಾರದ ಖಾತೆಗಳಿಂದ 6 ಸಾವಿರ ಕೋಟಿ ಹಣ ಲಪಟಾಯಿಸಿದ್ದಾನೆ. ಶ್ರೀಕಿಯನ್ನ ಒಂದೊಂದು ತಿಂಗಳು ಬಿಡ್ ತೆಗೆದುಕೊಳ್ಳುತಿದ್ರು ಎಂದು ಆರೋಪಿಸಿದರು.

ಬಿಟ್ ಕಾಯಿನ್ ಅಕ್ರಮ ದಂಧೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ನಾಯಕರ ಪಾತ್ರ ಇರುವ ಬಗ್ಗೆ ಕಾಂಗ್ರೆಸ್ ಪಕ್ಷ ದಾಖಲೆಗಳ ಸಂಗ್ರಹದಲ್ಲಿ ತೊಡಗಿದೆ. ಪ್ರತಿಯೊಂದಕ್ಕೂ ಕಾಂಗ್ರೆಸ್ ವಿರುದ್ಧ ಆರೋಪ ಮಾಡುವುದನ್ನು ಬಿಜೆಪಿ ಬಿಡಬೇಕು. ಬಿಟ್ ಕಾಯಿನ್ ದಂಧೆಯಲ್ಲಿ ಯಾರಿದ್ದಾರೆಂದು ಬಹಿರಂಗಪಡಿಸಬೇಕು. ಈ ವಿಚಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರು ಏಕೆ ಬಹಿರಂಗ ಹೇಳಿಕೆ ನೀಡಿದರೆಂದು ಸ್ಪಷ್ಟ ಮಾಡಬೇಕು. ತನಿಖೆಯನ್ನು ಇಡಿ ಐಟಿಯವರಿಗೆ ಯಾವಾಗ ವಹಿಸಿದ್ದೀರಿ ಎಂದು ಎಂ.ಲಕ್ಷ್ಮಣ್ ಪ್ರಶ್ನಿಸಿದರು.

15 ರಾಜ್ಯಗಳ ಬ್ಯಾಂಕ್ ಖಾತೆದಾರರ ಹಣ ಕದ್ದಿರುವ ಬಗ್ಗೆ ಮಾಹಿತಿ ನೀಡಬೇಕು. ಪ್ರಸಿದ್ದಶೆಟ್ಟಿಗೂ ಬಿಜೆಪಿ ನಾಯಕರಿಗೆ ಇರುವ ಸಂಬಂಧವೇನೆಂಬುದನ್ನು ತಿಳಿಸಬೇಕು. ಅಕ್ರಮ ದಂಧೆಯಲ್ಲಿ ಪೊಲೀಸರು ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ. ಹಾಗಾಗಿ ಸುಪ್ರೀಂ ಕೋರ್ಟ್ ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಎಂ ಲಕ್ಷ್ಮಣ್ ಹೇಳಿದರು.

 ಬೈಡನ್ ಅವರು ಮೋದಿಗೆ ಎಚ್ಚರಿಕೆ ನೀಡಿದ ಬಳಿಕ ಗಂಭೀರವಾಗಿ ಪರಿಗಣನೆ.

ಶ್ರೀಕಿಯನ್ನು ಬಿಡ್ ಮಾಡಲಾಗುತಿತ್ತು. ಆತನಿಗೆ ಸ್ಟಾರ್ ಹೋಟೆಲ್‌ ನಲ್ಲಿ ಇರಿಸಲಾಗುತಿತ್ತು. ಶ್ರೀಕಿಗೆ ತಿಂಗಳಿಗೆ 60 ಲಕ್ಷ ರೂಪಾಯಿ ಖರ್ಚು‌ ಭರಿಸುತ್ತಿದ್ದರು. ಆದರೆ ಯಾರು ಗೊತ್ತಾಗಬೇಕು. 1400 ಬಿಟ್ ಕಾಯಿನ್ ಕದಿಯಲಾಗಿದ್ದು, ಇದನ್ನು ಬೈಡನ್ ಅವರು ಮೋದಿ ಅವರಿಗೆ ಮಾಹಿತಿ ನೀಡಿ, ಬೈಡನ್ ಮೋದಿಗೆ ಎಚ್ಚರಿಕೆ ನೀಡಿದ್ದಾರೆ. ನೀವು ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ನಾವು ಬೇರೆ ರೀತಿ ಮಾಡುತ್ತೇವೆ ಎಂದಿದ್ದರು. ಆಗ ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ ಎಂದು ಲಕ್ಷ್ಮಣ್ ಆರೋಪಿಸಿದ್ದಾರೆ.

ಶ್ರೀಕಿ ಸಾಯಿಸಲು ಡ್ರಗ್ ಅಡಿಕ್ಟ್ ಮಾಡಲಾಗಿದೆ.

ಇದರಲ್ಲಿ ಪೊಲೀಸ್ ಅಧಿಕಾರಿಗಳು ಸಹಾ ಭಾಗಿಯಾಗಿದ್ದಾರೆ. ಐಪಿಎಸ್ ಅಧಿಕಾರಿಗಳು ಅವರ ಸಂಬಂಧಿಕರ ಪಾತ್ರ ಇದೆ. ಕೂಡಲೇ ಶ್ರೀಕಿ ವಿರುದ್ದ ಎಫ್ ಐ ಆರ್ ದಾಖಲಿಸಿ. ಶ್ರೀಕಿ ಎಲ್ಲಿದ್ದಾರೆ ಅನ್ನೋ ಮಾಹಿತಿ ಬೇಕು. ಆತನನ್ನು 3 ಸಾವಿರ ಕಿಲೋ‌ ಮೀಟರ್ ದೂರಕ್ಕೆ ಕರೆದುಕೊಂಡು ಹೋಗಲಾಗಿದೆ. ಆತನನ್ನು ಸಾಯಿಸಲು ಡ್ರಗ್ ಅಡಿಕ್ಟ್ ಮಾಡಲಾಗಿದೆ. ಡ್ರಗ್ ಖರೀದಿಸಲು ಬಿಟ್ ಕಾಯಿನ್ ಬಳಸಲಾಗಿದೆ. ಬಿಟ್ ಕಾಯಿನ್ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಎಂ. ಲಕ್ಷ್ಮಣ್ ಆಗ್ರಹಿಸಿದರು.

Key words: Bail-bit coin-shriki-kpcc-spoksperson-M. Laxman -alleges.

 

website developers in mysore