ಪ್ರೊ.ಕೆ.ಎಸ್.ಭಗವಾನ್ ಮುಖಕ್ಕೆ ಮಸಿ ಬಳಿದ ಮಹಿಳಾ ವಕೀಲೆ ಹೇಳಿದ್ದು, ‘ಐ ಆ್ಯಮ್ ರೆಡಿ ಫಾರ್ ಎವರಿಥಿಂಗ್ ‘

Promotion

 

ಬೆಂಗಳೂರು, ಫೆಬ್ರವರಿ 03, 2021 🙁 www.justkannada.in news ) ಮುಖಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾದ ಮೈಸೂರಿನ ಹಿರಿಯ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ .

ಹಿಂದೂ ಧರ್ಮ ಹಾಗೂ ಶ್ರೀರಾಮನ ಬಗ್ಗೆ ಸದಾ ಅವಹೇಳನಕಾರಿ ಹೇಳಿಕೆಗಳನ್ನು ಸಾಹಿತಿ ಪ್ರೊ.ಭಗವಾನ್ ನೀಡುತ್ತಿದ್ದಾರೆ ಎಂದು ಆರೋಪಿಸಿ ವಕೀಲೆ ಮೀರಾ ರಾಘವೇಂದ್ರ ಇಂದು ಕೋರ್ಟ್ ಆವರಣದಲ್ಲೇ ಮುಖಕ್ಕೆ ಮಸಿ ಬಳಿದರು.

jk

ಜಾಮೀನು ಪಡೆಯಲು ಕೋರ್ಟ್ ಗೆ ಆಗಮಿಸಿದ್ದ ಭಗವಾನ್ ಮುಖಕ್ಕೆ ಮೀರಾ ರಾಘವೇಂದ್ರ ಮಸಿ ಬಳಿದು, ಇಷ್ಟು ವಯಸ್ಸಾಗಿದೆ ಸದಾ ದೇವರ ಬಗ್ಗೆ ರಾಮನ ಬಗ್ಗೆ ಮಾತಾಡ್ತಿರ ನಾಚಿಕೆ ಆಗಲ್ವಾ ನಿಮಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪ್ರೊ. ಭಗವಾನ್ , ಆಕೆಯನ್ನು ಅರೆಸ್ಟ್ ಮಾಡಿ ಎಂದು ಜತೆಯಲ್ಲಿದ್ದ ಗನ್ ಮ್ಯಾನ್ ಗೆ ಹೇಳುತ್ತಾರೆ. ಅದಕ್ಕೆ ಪ್ರತಿಕ್ರಿಯಿಸುವ ಮೀರಾ ರಾಘವೇಂದ್ರ, ನಾನು ಎಲ್ಲದಕ್ಕೂ ರೆಡಿ, ಜೈಲಿಗೆ ಹೋಗಲೂ ಸಿದ್ಧ ಎಂದು ಹೇಳಿರುವುದು ದೃಶ್ಯದಲ್ಲಿ ಸೆರೆಯಾಗಿದೆ.

 baghavan-mysore-bangalore-court-black-ink-court-police

ಘಟನೆ ಬಳಿಕ ಭಗವಾನ್ ರನ್ನು ಗನ್ ಮ್ಯಾನ್ ಹಾಗೂ ಪೊಲೀಸರು ಕೋರ್ಟ್ ಆವರಣದಿಂದ ಕರೆದೊಯ್ದಿದ್ದರು. ನಂತರ ಪ್ರೊ.ಭಗವಾನ್, ಹಲಸೂರು ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದರು.

oooo

key words : baghavan-mysore-bangalore-court-black-ink-court-police