ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೊ ಜುಲೈ ಮಾಸಕ್ಕೂ ಏನೊ ಒಂಥರ ಸಂಬಂಧ..!

 

ಬೆಂಗಳೂರು, ಜು.23, 2021 : (www.justkannada.in news) ಪ್ರಸ್ತುತ ಆಡಳಿತಾರೂಢ ಬಿಜೆಪಿ ಪಕ್ಷದಲ್ಲಿ ರಾಜಕೀಯ ವಿಪ್ಲವೇ ನಡೆದಿದೆ. ನಾಲ್ಕನೆ ಬಾರಿ ಮುಖ್ಯಮಂತ್ರಿಯಾಗಿರುವ ಬಿ.ಎಸ್. ಯಡಿಯೂರಪ್ಪ ಈ ಬಾರಿಯೂ ಅವಧಿ ಪೂರ್ಣ ಮಾಡುವ ಸೂಚನೆಗಳು ಕಾಣುತ್ತಿಲ್ಲಾ. ಈ ನಡುವೆ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೊ ಜುಲೈ ಮಾಸಕ್ಕೂ ‘ ಏನೊ ಒಂಥರ ಸಂಬಂಧ..’ ಎನಿಸಲಾರಂಭಿಸಿದೆ.

jk

ಇದೇ ಜುಲೈ 26 ರಂದು ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಎರಡು ವರ್ಷಗಳನ್ನು ಪೂರೈಸಲಿದ್ದಾರೆ. ವಿಪರ್ಯಾಸವೆಂದರೆ, ಅದೇ ದಿನ ಯಡಿಯೂರಪ್ಪ, ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವರು ಎಂಬ ಸುದ್ದಿ ಈಗಾಗಲೇ ಹರಿದಾಡುತ್ತಿರುವುದು.

ಸ್ವತಃ ಯಡಿಯೂರಪ್ಪ ನವರೇ ತಾವು ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಬಾರಿ ಬಿಜೆಪಿಯ ವರಿಷ್ಠರು ಯಡಿಯೂರಪ್ಪ ನವರ ಪದಚುತಿಗೆ ಮುಂದಾಗಿರುವುದು ಅವರ ಮೇಲೆ ಸ್ವಪಕ್ಷದವರೆ ಮಾಡುತ್ತಿರುವ ಅಗಾಧ ಭ್ರಷ್ಟಾಚಾರದ ಆಪಾದನೆಗಳು ಹಾಗೂ ಆಡಳಿತದಲ್ಲಿ ಅವರ ಕುಟುಂಬದವರ ಹಸ್ತಕ್ಷೇಪ ಕಾರಣವಾಗಿದೆ.

ಜುಲೈ ತಿಂಗಳು ಯಡಿಯೂರಪ್ಪ ನವರ ಪಾಲಿಗೆ ಕಂಟಕದ ಮಾಸವೆಂದೇ ಅನಿಸುತ್ತದೆ. ಕಾರಣ, ಯಡಿಯೂರಪ್ಪ ಎರಡನೆಯ ಬಾರಿಗೆ , ಅಂದರೆ 2008 ರಲ್ಲಿ ಮುಖ್ಯ ಮಂತ್ರಿಯಾಗಿದ್ದರು. 2011 ರ ಜುಲೈ 31 ರಂದು ಭ್ರಷ್ಟಾಚಾರ ಆರೋಪ ಹೊತ್ತು ರಾಜೀನಾಮೆ ನೀಡಬೇಕಾಯಿತು.
ಈಗಲೂ ಸಹ ಅವರು ಜುಲೈ ೨೬ ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವರೆಂಬ ಸುದ್ದಿ ಹಬ್ಬಿರುವುದು ಈ ಅನಿಸಕೆಗೆ ಕಾರಣ.

ಕೃಪೆ : ಎಂ.ಸಿದ್ದರಾಜು, ಹಿರಿಯ ಪತ್ರಕರ್ತರು, ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷರು.

 

oooooooo

key words: bagalore-bjp-yadiyurappa-cm-resignation-july