ಪರೀಕ್ಷೆ ಬರೆಯುವಾಗಲೇ ಎದೆನೋವು: ಹೃದಯಾಘಾತದಿಂದ ವಿದ್ಯಾರ್ಥಿ ಸಾವು.

Promotion

ಬಾಗಲಕೋಟೆ,ಸೆಪ್ಟಂಬರ್,30,2023(www.justkannada.in):  ಪರೀಕ್ಷೆ ಬರೆಯುವಾಗಲೇ ಎದೆನೋವು ಕಾಣಿಸಿಕೊಂಡು  ಹೃದಯಾಘಾತಕ್ಕೀಡಾಗಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಬಾಗಲಕೋಟೆಯ ಇನಾಂ ಹಂಚಿನಾಳ ಗ್ರಾಮದ ರಾಹುಲ್ ಮೃತಪಟ್ಟ ವಿದ್ಯಾರ್ಥಿ. ಹುಲ್ಯಾಳ ಗ್ರಾಮದ ಖಾಸಗಿ ಪ್ರೌಢಶಾಲೆಯಲ್ಲಿ ರಾಹುಲ್ 9ನೇ ತರಗತಿ ಓದುತ್ತಿದ್ದ. ರಾಹುಲ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದೆ.

ಈ ನಡುವೆ ಇಂದು ಪರೀಕ್ಷೆ ಬರೆಯುವ ವೇಳೆ ರಾಹುಲ್ ಗೆ  ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ಶಿಕ್ಷಕರು ಮುಂದಾಗಿದ್ದು ಆದರೆ ಮಾರ್ಗಮಧ್ಯದಲ್ಲೇ ವಿದ್ಯಾರ್ಥಿ ರಾಹುಲ್ ಮೃತಪಟ್ಟಿದ್ದಾನೆ ಎನ್ನಲಾಗಿದೆ.

Key words: bagalkote- Student -dies – heart attack.