ಡಿಸೆಂಬರ್ 9ಕ್ಕೆ ‘ಬಡವ ರಾಸ್ಕಲ್’ ಟೀಸರ್ ರಿಲೀಸ್, 24ರಂದು ಸಿನಿಮಾ ಬಿಡುಗಡೆ

Promotion

ಬೆಂಗಳೂರು, 06 ಡಿಸೆಂಬರ್, 2021 (www.justkannada.in): ಡಾಲಿ ಧನಂಜಯ್ ಅಭಿನಯದ ‘ಬಡವ ರಾಸ್ಕಲ್’ ಚಿತ್ರದ ಟೀಸರ್ ಡಿಸೆಂಬರ್ 9 ರಂದು ಬಿಡುಗಡೆಯಾಗಲಿದೆ.

ಈ ಕುರಿತು ಮಾಹಿತಿ ನೀಡಿರುವ ಚಿತ್ರತಂಡ, ‘ಬಡವ ರಾಸ್ಕಲ್’ ಇದೇ ಡಿಸೆಂಬರ್ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಡಾಲಿ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಚಿತ್ರತಂಡ ಹೇಳಿದೆ.

ಧನಂಜಯ್ ಚಿತ್ರದ ಪ್ರಮೋಷನ್ ನಲ್ಲಿ ನಿರತರಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಲವಾರು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಜತೆಗೆ ಹಲವು ಸೋಷಿಯಲ್ ಮೀಡಿಯಾ ಪ್ಲಾಟ್ ಫಾರಂಗಳಲ್ಲಿ ಪ್ರಚಾರ ನಡಸುತ್ತಿದ್ದಾರೆ.

ಚಿತ್ರವು ಕಾಮನ್ ಮ್ಯಾನ್ ಚಿತ್ರವಾಗಿದ್ದು, ಮಧ್ಯಮ ವರ್ಗದ ಕೌಟುಂಬಿಕ ಮನರಂಜನೆಯಾಗಿದೆ ಮತ್ತು ಎಲ್ಲಾ ರೀತಿಯ ಪ್ರೇಕ್ಷಕರ ರಂಜಿಸಲಿದೆ ಎಂದಿದ್ದಾರೆ ಡಾಲಿ.