ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಮತ್ತು ಅವರ ಪುತ್ರನ ವಿರುದ್ಧ ಕೊಲೆ ಕೇಸ್ ದಾಖಲಿಸುವಂತೆ ಬಡಗಲಪುರ ನಾಗೇಂದ್ರ ಒತ್ತಾಯ.

ಬೆಂಗಳೂರು,ಅಕ್ಟೋಬರ್,4,2021(www.justkannada.in): ಉತ್ತರಪ್ರದೇಶದಲ್ಲಿ  ನಡೆದ ಹಿಂಸಾಚಾರ ಮತ್ತು ಪ್ರತಿಭಟನಾ ನಿರತ ರೈತರ ಸಾವು ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಮತ್ತು ಅವರ ಪುತ್ರನ ವಿರುದ್ಧ ಕೊಲೆ ಕೇಸ್ ದಾಖಲಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯ ಮಾಡಿದ್ದಾರೆ.

ನಿನ್ನೆ ಉತ್ತರಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿಸಲಾಗಿತ್ತು. ಈ ವೇಳೆ ಕಾರಿನಲ್ಲಿ ಕೇಂದ್ರ ಸಚಿವ ಅಜಯ್​ ಕುಮಾರ್​ ಮಿಶ್ರಾ ಅವರ ಪುತ್ರ ಇದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಘಟನೆಗೆ ಕರ್ನಾಟಕ ರಾಜ್ಯ ರೈತ ಸಂಘ ಖಂಡಿಸಿದ್ದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹಾಗೂ ಅವರ ಪುತ್ರನ ವಿರುದ್ಧ ಕೊಲೆ ಕೇಸು ದಾಖಲಿಸುವಂತೆ ಬಡಗಲಪುರ ನಾಗೇಂದ್ರ  ಆಗ್ರಹಿಸಿದ್ದಾರೆ.

ಉತ್ತರ ಪ್ರದೇಶ ಸರ್ಕಾರ ಹಾಗೂ ಹರಿಯಾಣ ಸರ್ಕಾರ ರೈತ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿವೆ. ಹರಿಯಾಣದಲ್ಲಿ ರೈತರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಈ ಘಟನೆ ಖಂಡಿಸಿ ರಾಜ್ಯದಾದ್ಯಂತ ಹೋರಾಟ ಮಾಡುತ್ತೇವೆ. ಘಟನೆಗೆ ಸಂಬಂಧಪಟ್ಟಂತೆ ಸೂಕ್ತ ತನಿಖೆ ಆಗಬೇಕು. ಕೇಂದ್ರ ಗೃಹ ಸಚಿವರು ರಾಜೀನಾಮೆ‌ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Key words: Badalepura Nagendra -demands -murder case- against- Union Home Minister- his son

ENGLISH SUMMARY…

Badagalapura Nagendra demands govt. to file case against Union Home Minister and his son
Bengaluru, October 4, 2021 (www.justkannada.in): Condemning the violence and death of a few farmers while protesting in Uttar Pradesh, Karnataka State Farmers Association President Badagalapura Nagendra has demanded the government to file a case of murder against the Union Home Minister and his son and initiate action.
In a gruesome incident at Likhimpura Kheri District in Uttar Pradesh, a car ran over a group of protesting farmers. It is alleged that Union Minister Ajay Kumar Mishra’s son was in the car. The Karnataka State Farmers’ Association has strongly condemned the incident, and has demanded the Government of India to file a murder case against the Union Minister and his son.
Keywords: Farmers Association/ Badagalapura Nagendra/ Govt. of India/ case/ Union Minister