ಸಚಿವ ಶ್ರೀರಾಮುಲು ಕಾರು ಅಡ್ಡ ಹಾಕಿ ಮಾಜಿ ಸಚಿವ ಬಾಬೂರಾವ್ ಚಿಂಚನಸೂರ್ ಆಕ್ರೋಶ.

Promotion

ಯಾದಗಿರಿ,ಅಕ್ಟೋಬರ್,9,2021(www.justkannada.in): ಶಾಲಾ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನ ನೀಡದ ಹಿನ್ನೆಲೆ ಸಚಿವ ಶ್ರೀರಾಮುಲು ಅವರ ಕಾರನ್ನ ಅಡ್ಡ ಹಾಕಿ  ಮಾಜಿ ಸಚಿವ ಬಾಬೂರಾವ್ ಚಿಂಚನಸೂರ್ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಯಾದಗಿರಿ ತಾಲ್ಲೂಕಿನ ಬಂದಳ್ಳಿ ಗ್ರಾಮದ ಏಕಲವ್ಯ ಮಾದರಿ ವಸತಿ ಶಾಲೆ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನ ನೀಡದ ಬಾಬುರಾವ ಚಿಂಚನಸೂರ್  ಹಾಗೂ ಅವರ ಬೆಂಬಲಿಗರು ಜಿಲ್ಲಾಡಳಿತ, ಸಚಿವ ಶ್ರೀರಾಮಲು ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿ ಸಚಿವ ಶ್ರೀರಾಮುಲು ಕಾರು ತಡೆದು ಪ್ರತಿಭಟನೆ ನಡೆಸಿದರು.

ನಾನು ಐದು ಬಾರಿ ಶಾಸಕ, ಎರಡು ಬಾರಿ ಸಚಿವನಾಗಿದ್ದೇನೆ. ನನ್ನ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡದಿದ್ದರೆ ಹೇಗೆ  ಎಂದು ಮಾಜಿ ಸಚಿವ ಬಾಬೂರಾವ್ ಚಿಂಚನಸೂರ್ ಕಿಡಿಕಾರಿದರು.  ಈ ವೇಳೆ ಸಚಿವ ಶ್ರೀರಾಮಲು ಅವರು  ಬಾಬೂರಾವ್ ಚಿಂಚನಸೂರ್ ಅವರನ್ನ ಮನವೊಲಿಸಲೂ ಆಗದೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಹಾಗೆಯೇ ವಾಪಾಸ್  ತೆರಳಿದರು ಎನ್ನಲಾಗಿದೆ.

Key words: Baburao chinchanasur –outrage- Minister -Shriramulu -yadgir