ಕೋಟ್ಯಾಂತರ ಭಾರತೀಯರ ಕನಸು ಇಂದು ಸಾಕಾರ- ರಾಮಮಂದಿರ ನಿರ್ಮಾಣ ಶಿಲನ್ಯಾಸದ ಬಳಿಕ ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನುಡಿ

Promotion

ಉತ್ತರ ಪ್ರದೇಶ,ಆ,5,2020(www.justkannada.in):  ‘130 ಕೋಟಿ ಭಾರತೀಯರು ಮತ್ತು ಭಾರತದ ಬಗ್ಗೆ ಗೌರವವಿರುವ ಕೋಟ್ಯಂತರ ಜನರ ಭಾವನೆಗಳಿಗೆ ಗೌರವ ಕೊಟ್ಟ ಐತಿಹಾಸಿಕ ದಿನ ಇದು. ಪ್ರಧಾನಿ ಮೋದಿ ಅವರಿಂದ ಕೋಟ್ಯಾಂತರ ಭಾರತೀಯರ ಕನಸು ಇಂದು ಸಾಕಾರವಾಗಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನುಡಿದರು.jk-logo-justkannada-logo

ಇಂದು ಆಯೋಧ್ಯೆಯಲ್ಲಿ ನಡೆದ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದ ಬಳಿಕ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್,    ಕಳೆದ ಐದು ಶತಮಾನಗಳ ಸಂಕಲ್ಪ ಈಗ ಪೂರ್ಣಗೊಳ್ಳುತ್ತಿದೆ. ಉತ್ತರ ಪ್ರದೇಶದ ಪವಿತ್ರ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲನ್ಯಾಸ ನೆರವೇರಿದೆ. ಈ ದಿನ ಐತಿಹಾಸಿಕ ಭಾವನಾತ್ಮಕ ದಿನ. ಇದು ಎಲ್ಲಾ ಭಾರತೀಯರಿಗೆ ಸಂದ ಗೌರವ. ಕೋಟ್ಯಾಂತರ ಭಾರತೀಯರ ಕನಸು ಪ್ರಧಾನಿ ಮೋದಿಯಿಂದ ಸಾಕಾರ. 5 ಶತಮಾನಗಳ ಹೋರಾಟಕ್ಕೆ ತಾಳ್ಮೆಗೆ ಸಿಕ್ಕ ಪ್ರತಿಫಲ ಎಂದು ನುಡಿದರು. ayodhya- ram mandir-construction-PM-Narendra modi-cm- yogi adityanath

ದೇಶವೇ ಕೊರೋನಾ ವಿರುದ್ದ ಹೋರಾಡುತ್ತಿದೆ. ಈ ವೇಳೆ ನಿಯಮ ಪಾಲಿಸಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಮಾಡಿದ್ದೇವೆ. ರಾಮಮಂದಿರ ನಿರ್ಮಾಣ ಕಾರ್ಯಕ್ರಮವಲ್ಲ. ಅದು ರಾಮರಾಜ್ಯ ನಿರ್ಮಾಣ ಕನಸಿಕ ಕಾರ್ಯಕ್ರಮ ಎಂದು ಯೋಗಿ ಆದಿತ್ಯನಾಥ್ ಬಣ್ಣಿಸಿದರು.

Key words: ayodhya- ram mandir-construction-PM-Narendra modi-cm- yogi adityanath