ಬಜೆಟ್ ಅನ್ನು ಲದ್ದಿ ಪೇಪರ್ ಎಂದು ಟೀಕಿಸಿದ್ದ ಹೆಚ್.ಡಿಕೆ ವಿರುದ್ಧ ಆಯನೂರು ಮಂಜುನಾಥ್ ಕಿಡಿ.

Promotion

ಬೆಂಗಳೂರು,ಮಾರ್ಚ್,14,2022(www.justkannada.in) ಬಜೆಟ್ ಅನ್ನು ಲದ್ದಿ ಪೇಪರ್ ಎಂದು ಟೀಕಿಸಿದ್ದ ಹೆಚ್.ಡಿಕೆ ವಿರುದ್ಧ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಕಿಡಿ ಕಾರಿದ್ದಾರೆ.

ಬಜೆಟ್  ಅನ್ನು ಲದ್ದಿ ಪೇಪರ್ ಅಂತಾರೆ. ಬಜೆಟ್ ನಲ್ಲಿ ಉಪ್ಪು, ಹುಳಿ ಖಾರ ಇಲ್ಲ  ಅಂತಾರೆ.  ಬಜೆಟ್ ಓದೋದು ಬಿಟ್ಟು ನೆಕ್ಕುತಾರಾ ಅಂತಾ ಎಂದು ಹೆಚ್.ಡಿಕೆ ವಿರುದ್ಧ ಆಯನೂರು ಮಂಜುನಾಥ್ ಲೇವಡಿ ಮಾಡಿದರು.

ಹಾಗೆಯೇ ಸದನದ ಹೊರಗೆ ಬರೀ ಸುದ್ದಿಗೋಷ್ಠಿ ಮಾಡೋದಲ್ಲ ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕೋದಲ್ಲ. ಸದನದಲ್ಲಿ ಹಾಜರಾಗಿ ಚರ್ಚೆ ಮಾಡಬೇಕು ಎಂದು ಹರಿಹಾಯ್ದರು.

Key words: aynur Manjunath – against-HDK