‘ಅವನೇ ಶ್ರೀಮನ್ನಾರಾಯಣ’ನ ಗಳಿಕೆ ಲೆಕ್ಕಾಚಾರ !

Promotion

ಬೆಂಗಳೂರು, ಡಿಸೆಂಬರ್ 31, 2019 (www.justkannada.in): ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಬಾಕ್ಸ್​ ಆಫೀಸ್​ ಲೆಕ್ಕಾಚಾರ ಶುರುವಾಗಿದೆ.

ಮೊದಲ ದಿನ ಈ ಚಿತ್ರ 12 ಕೋಟಿ ಕಲೆಕ್ಷನ್​ ಮಾಡಿದೆ ಎನ್ನಲಾಗಿತ್ತು. ಶನಿವಾರ 11 ಕೋಟಿ ಹಾಗೂ ಭಾನುವಾರ 13 ಕೋಟಿ ರೂಪಾಯಿ ಗಳಿಸಿದೆ ಎನ್ನಲಾಗಿದೆ. ಇನ್ನು, ಸೋಮವಾರವೂ ಸಿನಿಮಾ ಉತ್ತಮ ಕಲೆಕ್ಷನ್​ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಕ್ರಿಸಮಸ್​ ತಿಂಗಳಾದ್ದರಿಂದ ಕೆಲ ಶಾಲಾ-ಕಾಲೇಜುಗಳಿಗೆ ರಜೆ ಇರುತ್ತದೆ. ಹೀಗಾಗಿ, ಚಿತ್ರಮಂದರಿಕ್ಕೆ ಬರುವವರ ಸಂಖ್ಯೆ ಕಡಿಮೆ ಆಗಿಲ್ಲ. ಸೋಮವಾರದ ಗಳಿಕೆ 5 ಕೋಟಿ ದಾಟಿದೆ ಎಂದು ಅಂದಾಜಿಸಲಾಗಿದೆ. ಆದರೆ, ಚಿತ್ರತಂಡ ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ.