“ಸಾಹಿತಿಗಳ ದಾಖಲೆಗಳ ಸಂರಕ್ಷಣೆಗಾಗಿ ಜಯಲಕ್ಷ್ಮೀ ವಿಲಾಸ ಅರಮನೆ ದುರಸ್ತಿಗೆ ಸಿದ್ಧತೆ” : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ 

Promotion

ಮೈಸೂರು,ಮಾರ್ಚ್,17,2021(www.justkannada.in) : ಸುಮಾರು 34 ಸಾಹಿತಿಗಳಿಗೆ ಸಂಬಂಧಿಸಿದ ದಾಖಲೆಗಳು ದೊರೆಯಲಿದ್ದು, ಅವುಗಳ ಸಂರಕ್ಷಣೆಗೂ ಅವಕಾಶ ಕೇಳಲಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಜಯಲಕ್ಷ್ಮೀ ವಿಲಾಸ ಅರಮನೆಯನ್ನು ಹಂತ,ಹಂತವಾಗಿ ದುರಸ್ತಿ ಕಾರ್ಯ ಮಾಡಿಸಲಾಗುವುದು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.jkಮಾನಸಗಂಗೋತ್ರಿಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಡಿ.ವಿ.ಜಿ.ಬಳಗ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ “ಡಿ.ವಿ.ಜಿ. ಮತ್ತು ಬಿ.ಜಿ.ಎಲ್.ಸ್ವಾಮಿ ಗ್ಯಾಲರಿ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

34 ಸಾಹಿತಿಗಳ ದಾಖಲೆಗಳು ಪ್ರದರ್ಶನಕ್ಕೆ

ಡಿ.ವಿ.ಜಿ. ಮತ್ತು ಬಿ.ಜಿ.ಎಲ್ ಸ್ವಾಮಿ ಅವರ ಗ್ಯಾಲರಿ ಮಾದರಿಯಲ್ಲಿ ಸುಮಾರು 34 ಸಾಹಿತಿಗಳ ದಾಖಲೆಗಳನ್ನು ಪ್ರದರ್ಶನಕ್ಕೆ ದೊರೆಯಲಿವೆ ಎಂದು ಮೈಸೂರು ವಿವಿ ಪ್ರಸಾರಾಂಗ ನಿರ್ದೇಶಕ ಪ್ರೊ.ಎನ್.ತಳವಾರ ಮಾಹಿತಿ ನೀಡಿದ್ದಾರೆ. ಹೀಗಾಗಿ, ಆ ದಾಖಲೆಗಳ ಸಂರಕ್ಷಣೆಗೂ ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಸಂಸ್ಕೃತಿ ಬಾಳಿ, ಬೆಳಗಬೇಕಾದರೆ ಆ ಸಂಸ್ಕೃತಿಯ ಪ್ರಾತಃಸ್ಮರಣಿಯರ ಸ್ಮರಣೆ ಪ್ರಮುಖ 

ಒಂದು ಸಂಸ್ಕೃತಿ ಬಾಳಿ, ಬೆಳಗಬೇಕಾದರೆ ಆ ಸಂಸ್ಕೃತಿಯ ಪ್ರಾತಃಸ್ಮರಣಿಯರನ್ನು ಜನಸಮುದಾಯದ ನೆನಪಿನಿಂದ ಜಾರದಂತೆ ಮಾಡಬೇಕಾದುದು ಪ್ರತಿಯೊಬ್ಬರ ಕರ್ತವ್ಯ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಭಿಪ್ರಾಯವ್ಯಕ್ತಪಡಿಸಿದರು.

ಮಹಾನ್ ಚಿಂತಕರ ಹೊಟ್ಟೆಯಲ್ಲಿ ಮಹಾಮೇಧಾವಿಗಳು ಹುಟ್ಟುವುದು ಅಪರೂಪವಲ್ಲ

ಮಹಾನ್ ಚಿಂತಕರ ಹೊಟ್ಟೆಯಲ್ಲಿ ಮಹಾಮೇಧಾವಿಗಳು ಹುಟ್ಟುವುದು ಅಪರೂಪವಲ್ಲ. ಆದರೆ, ಇದು ಬಹಳ ಸಹಜ ಎಂದು ತೋರಬಹುದಾದರೂ, ಪ್ರತಿಯೊಂದು ತಲೆಮಾರಿನವರೂ ಹೊಸದಾಗಿ ವಿದ್ಯೆಯನ್ನು ಪಡೆದುಕೊಂಡು ಸಾಧನೆ ಮಾಡಬೇಕಾಗುತ್ತದೆ ಎಂದರು.

ಈ ವಿಷಯವಾಗಿ ನಮಗೆ ಎದ್ದು ಕಾಣುವವರು ಕುವೆಂಪು ಹಾಗೂ ತೇಜಸ್ವಿಯವರು. ತೇಜಸ್ವಿಯವರು ತಮ್ಮ ಸ್ವಂತ ಪರಿಶ್ರಮದಿಂದ ತಮ್ಮದೇ ಹಾದಿಯನ್ನು ಕಂಡುಕೊಂಡರು. ದೊಡ್ಡ ಲೇಖಕರಾದರು ಅವರು ಬದುಕಿದ್ದರೆ, ತಜ್ಞರು ಹೇಳುವಂತೆ, ಕನ್ನಡಕ್ಕೆ ಇನ್ನೊಂದು ಜ್ಞಾನಪೀಠ ಪ್ರಶಸ್ತಿಯನ್ನು ದಕ್ಕಿಸುತ್ತಿದ್ದರು. ಇದು ಕನ್ನಡಿಗರಿಗೆ ಆದ ನಷ್ಟ ಎಂದು ಸ್ಮರಿಸಿದರು.

ಡಾ.ಬಿ.ಜಿ.ಎಲ್.ಸ್ವಾಮಿಯವರೂ ಡಿ.ವಿ.ಜಿ.ಯವರ ಶಕ್ತಿಯ ಚೈತನ್ಯದ ಪ್ರತೀಕ

ಡಾ.ಬಿ.ಜಿ.ಎಲ್.ಸ್ವಾಮಿಯವರೂ ಡಿ.ವಿ.ಜಿ.ಯವರ ಶಕ್ತಿಯ ಚೈತನ್ಯದ ಪ್ರತೀಕ. ನಮ್ಮ ವಿವಿಯಲ್ಲಿ ಅವರು ಸಂದರ್ಶಕ ಪ್ರಾಧ್ಯಾಪಕರಾಗಿದ್ದಾಗ ಸರಳವಾಗಿ, ಸಾಮಾನ್ಯ ವ್ಯಕ್ತಿಯಂತೆ ಬೆರೆತು ಬದುಕಿದರು. ತಾನು ಒಬ್ಬ ವಿಶ್ವಪ್ರಸಿದ್ಧ ವಿಜ್ಞಾನಿ ಎಂಬ ಅಹಮಿಕೆ ಅವರಿಗೆ ಕೊಂಚವೂ ಇರಲಿಲ್ಲ ಎಂದು ನೆನೆದರು.

ಸಾಹಿತಿಯಾದ ತೇಜಸ್ವಿಯವರು, ವಿಜ್ಞಾನದ ವಿಷಯಗಳಿಗೆ ಮಾರುಹೋದಂತೆ ವಿಜ್ಞಾನಿಯಾದ ಬಿ.ಜಿ.ಎಲ್.ಸ್ವಾಮಿಯವರು ಸಾಹಿತ್ಯಕ್ಕೆ ಮಾರುಹೋಗಿದ್ದರು. ಇಡೀ ಕರ್ನಾಟಕದಲ್ಲಿ ಮನೆ ಮಾತಾಗಿದ್ದ ಅಪರೂಪದ ಚಿಂತಕರಾಗಿದ್ದಾರೆ. ಇವರ ನೆನಪನ್ನು ಚಿರಸ್ಥಾಯಿಗೊಳಿಸುವುದರಿಂದ ಮುಂದಿನ ತಲೆಮಾರಿನವರಿಗೆ ಬಹಳ ಉಪಕಾರವಾಗುವುದು ಎಂದು ಹೇಳಿದರು.

ಡಿ.ವಿ.ಜಿ.ಯವರ ಕಗ್ಗ ಕನ್ನಡಿಗರ ಪಾಲಿಕೆ ಕಾಮಧೇನು, ಕಲ್ಪವೃಕ್ಷವಾಗಿದೆ

ಡಿ.ವಿ.ಜಿ ಯವರ ಬಗ್ಗೆ ಹೇಳಲೇಬೇಕಾಗಿಲ್ಲ. ಪ್ರತಿದಿನವೂ ಕರ್ನಾಟಕದಾದ್ಯಂತ ಅವರ ಸ್ಮರಣೆ ನಡೆಯುತ್ತಿದೆ. ವಿದ್ವಾಂಸರು, ಸಂಶೋಧಕರು, ಪ್ರವಚನಕಾರರು, ಅವರ ಮಂಕುತಿಮ್ಮನ ಕಗ್ಗದಿಂದ ಆಯ್ದ ಸಂದೇಶಗಳನ್ನು ಬಿತ್ತರಿಸುತ್ತಿದ್ದಾರೆ. ಡಿ.ವಿ.ಜಿ.ಯವರ ಕಗ್ಗ ಕನ್ನಡಿಗರ ಪಾಲಿಕೆ ಕಾಮಧೇನು, ಕಲ್ಪವೃಕ್ಷವಾಗಿದೆ. ಕರ್ನಾಟಕದಲ್ಲಿ ಸರ್ವಜ್ಞನ ವಚನಗಳಂತೆ, ಮಂಕುತಿಮ್ಮನ ಕಗ್ಗ ನಮ್ಮ ಜೀವನಕ್ಕೆ ಆಧಾರವಾಗಿದೆ ಎಂದು ವಿವರಿಸಿದರು.

ಎಲ್ಲ ವಿದ್ವಾಂಸರು ಮಂಕುತಿಮ್ಮನ ಕಗ್ಗ ಸಂದೇಶವನ್ನು ಆಧಾರವಾಗಿ ತೆಗೆದುಕೊಳ್ಳುವುದನ್ನು ನೋಡಿದರೆ ನಮ್ಮ ಸಮಾಜ ಮತ್ತು ಸಂಸ್ಕೃತಿಯ ಏಳಿಗೆಯ ಬಗ್ಗೆ ಮಾಡಿದ ಗಾಢವಾದ ಧ್ಯಾನ ಅನವರತವೂ ಬೆಳಕಿನ ಪುಂಜವಾಗಿ ಪರಿಣಮಿಸುತ್ತದೆ ಎನ್ನುವುದು ಖಾತ್ರಿಯಾಗುತ್ತದೆ ಎಂದರು.

Author-documents-Conservation-Preparing-Jayalakshmi's luxury palace-Chancellor-Prof.G.Hemant Kumar

ಡಿವಿಜಿ ಹಾಗೂ ಬಿಜಿಎಲ್ ಸ್ವಾಮಿಯವರ ಬಗೆಗೆ ಇಂದು ವೆಬ್ ಸೈಟ್ ಲೋಕಾರ್ಪಣೆ

ಡಿ.ವಿ.ಜಿ ಗದ್ಯ, ಪದ್ಯ, ನಾಟಕ, ವಿಚಾರ, ಸಾಹಿತ್ಯವನ್ನು ವಿಪುಲವಾಗಿ ರಚಿಸಿದರು. ಬೇರೆ ಭಾಷೆಗಳಲ್ಲೂ ಇಂಥ ಮಹಾಮೇಧಾವಿಗಳಿರಬಹುದು. ಆದರೆ, ಕನ್ನಡ ಭಾಷೆಗೆ ಇವರು ದಕ್ಕಿದ್ದು ನಮ್ಮ ಪೂರ್ವಪುಣ್ಯವೆಂದು ಧಾರಾಳವಾಗಿ ಹೇಳಬಹುದು.  ಡಿವಿಜಿ ಹಾಗೂ ಬಿಜಿಎಲ್ ಸ್ವಾಮಿಯವರ ಬಗೆಗೆ ಇಂದು ವೆಬ್ ಸೈಟ್ ಲೋಕಾರ್ಪಣೆಯಾಗಿದೆ. ಡಿವಿಜಿ ಯವರು ಕಲ್ಪಿಸಿಕೊಂಡ ಆದರ್ಶ ಬದುಕು, ಕನ್ನಡಿಗರ ಪಾಲಿಗೆ ಸಾಕಾರಗೊಳ್ಳಲಿ. ಬಿಜಿಎಲ್ ಸ್ವಾಮಿಯವರು ಬಹುಮುಖತೆ ನಮಗೆಲ್ಲ ಸ್ಪೂರ್ತಿ ನೀಡುತ್ತಿರಲಿ ಎಂದರು.

ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಎನ್.ಎಸ್ ‌ತಾರಾನಾಥ, ಪ್ರೊ‌.ಸಿ.ಆರ್.ನಾಗೇಂದ್ರನ್, ಬಿ.ಜಿ.ಎಲ್.ಸ್ವಾಮಿಯವರ ಬಂಧು ಗೀತಾ ನಾರಾಯಣ ಅಯ್ಯರ್, ಡಿ.ವಿ.ಜಿ.ಬಳಗ ಪ್ರತಿಷ್ಠಾನದ ಎಚ್.ರಾಜಕುಮಾರ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೆಶಕ ಪ್ರೊ.ಎಂ.ಬಿ.ಮಂಜುನಾಥ್, ಮೈಸೂರು ವಿವಿ ಪ್ರಸಾರಾಂಗ ನಿರ್ದೇಶಕ ಪ್ರೊ.ಎನ್.ಎಂ.ತಳವಾರ ಇತರರು ಉಪಸ್ಥಿತರಿದ್ದರು.

ENGLISH SUMMARY….

“Jayalakshmi Vilas to be renovated for conservation of documents of litterateurs: Prof. G. Hemanth Kumar
Mysuru, Mar.17, 2021 (www.justkannada.in): Prof. G. Hemanth Kumar, Vice-Chancellor, University of Mysore, today informed that the University is taking measures to conserve the documents pertaining to 34 litterateurs. The Jayalakshmi Vilas Palace will be renovated at an estimated cost of Rs. 6 crore, in phases, where the documents will be protected.
He inaugurated the ‘DVG and BGL Swami Gallery’, jointly organized by the Kuvempu Kannada Adhyayana Samsthe, University of Mysore and DVG Balaga Pratishtana, held at the B.M. Sri Auditorium in Manasagangotri today.Author-documents-Conservation-Preparing-Jayalakshmi's luxury palace-Chancellor-Prof.G.Hemant Kumar
In his address he observed that Prof. N. Talawar, Director, Publishing, University of Mysore had informed that rare documents of about 34 litterateurs are available which needs to be protected and exhibited like at the DVG and BGL Swami’s Gallery. Hence, steps will be taken for conserving those documents.
Prof. R. Shivappa, Registrar, University of Mysore, Prof. N. Estharnath, Professor (Retd.), University of Mysore, Prof. C.R. Nagendran, B.G.L. Swami’s relative Geetha Narayana Iyer, H. Rajkumar of the DVG Balaga Prathistana, Prof. M.B. Manjunath, Director, Kuvempu Kannada Adhyayana Samsthe, Prof. N.M. Talawar, Director, Publications, University of Mysore and others were present on the occasion.
Keywords: Prof. G. Hemanth Kumar/ University of Mysore/ DVG and B.G.L. Swami’s Gallery/ litterateurs/ documents/ conservation/ protection

key words : Author-documents-Conservation-Preparing-Jayalakshmi’s luxury palace-Chancellor-Prof.G.Hemant Kumar