ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ : ಸೆರೆನಾ ವಿಲಿಯಮ್ಸ್ ಮೂರನೇ ಸುತ್ತಿಗೆ

Promotion

ಮೆಲ್ಬರ್ನ್, ಜನವರಿ 23, 2019 (www.justkannada.in): ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಕೂಟದಲ್ಲಿ ಹಾಲಿ ಚಾಂಪಿಯನ್‌ ನವೋಮಿ ಒಸಾಕಾ, ವಿಶ್ವದ ನಂಬರ ವನ್‌ ಆಯಶ್‌ ಬಾರ್ಟಿ, ಸೆರೆನಾ ವಿಲಿಯಮ್ಸ್‌ ಮೂವರು ಗೆಲುವು ಸಾಧಿಸುವ ಮೂಲಕ ಮೂರನೇ ಸುತ್ತು ಪ್ರವೇಶಿಸಿದ್ದಾರೆ.

ಚೀನದ ಝೆಂಗ್‌ ಸೈಸೈ ಅವರನ್ನು 6-2, 6-4 ಸೆಟ್‌ಗಳಿಂದ ಸೋಲಿಸಿದ ನವೋಮಿ ಒಸಾಕಾ ಸುಲಭವಾಗಿ ಮೂರನೇ ಸುತ್ತಿಗೇರಿದ್ದಾರೆ. ದ್ವಿತೀಯ ಸೆಟ್‌ನಲ್ಲಿ 4-2 ಹಿನ್ನಡೆಯಲ್ಲಿದ್ದರೂ ವಿಚಲಿತರಾಗದೇ ಆಡಿದ ಒಸಾಕಾ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾದರು.

ವಿಶ್ವದ ನಂಬರ್‌ ವನ್‌ ಆಯಶ್‌ ಬಾರ್ಟಿ ಬಿರುಸಿನ ಆಟವಾಡಿ ಮೂರನೇ ಸುತ್ತಿಗೇರಿದ್ದಾರೆ. ಪೊಲೊನಾ ಹೆರ್ಕಾಗ್‌ ಅವರನ್ನು 6-1, 6-4 ಸೆಟ್‌ಗಳಿಂದ ಕೆಡಹಿದ ಬಾರ್ಟಿ ಪ್ರಶಸ್ತಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಇನ್ನು ಹಿರಿಯ ಆಟಗಾರ್ತಿ ಸೆಲಿನಾ ವಿಲಿಯಸ್ ಕಠಿಣ ಸವಾಲನ್ನು ಎದುರಿಸಿ ಸ್ಲೋವಾನಿಯದ ತಮರಾ ಜಿದಾನ್ಸೆಕ್‌ ಅವರನ್ನು 6-2, 6-4 ಸೆಟ್‌ಗಳಿಂದ ಸೋಲಿಸಿ ಮೂರನೇ ಸುತ್ತು ಪ್ರವೇಶಿಸಿದರು.