ಆ್ಯಷಸ್ ಸರಣಿ: ಮೊದಲ ಟೆಸ್ಟ್ ಪಂದ್ಯ ಗೆದ್ದ ಆಸ್ಟ್ರೇಲಿಯಾ

Promotion

ಬೆಂಗಳೂರು, ಡಿಸೆಂಬರ್ 11, 2021 (www.justkannada.in): ಆ್ಯಷಸ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ವಿರುದ್ಧ ಜಯಭೇರಿ ಸಾಧಿಸಿದೆ.

ಗಾಬಾ ಪಂದ್ಯವನ್ನು 9 ವಿಕೆಟ್ ಅಂತರದಿಂದ ಗೆದ್ದ ಪ್ಯಾಟ್ ಕಮಿನ್ಸ್ ಪಡೆ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ.

ಶುಕ್ರವಾರದ ಆಟದಲ್ಲಿ ಕ್ರೀಸ್ ಕಚ್ಚಿ ಪ್ರತಿರೋಧ ತೋರಿದ್ದ ನಾಯಕ ಜೋ ರೂಟ್ ಮತ್ತು ಡೇವಿಡ್ ಮಲಾನ್ ಇಂದು ಆರಂಭದಲ್ಲೇ ವಿಕೆಟ್ ಒಪ್ಪಿಸಿದರು. ರೂಟ್ 89 ರನ್ ಗಳಿಸಿದರೆ, ಮಲಾನ್ 82 ರನ್ ಬಾರಿಸಿದರು.

ಗೆಲುವಿಗೆ ಕೇವಲ 20 ರನ್ ಗಳಿಸಬೇಕಾದ ಸುಲಭ ಗುರಿ ಪಡೆದ ಆಸೀಸ್ ತಂಡ ಒಂದು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.