ಆಡಿಯೋ ವೈರಲ್ ವಿಚಾರ: ಶಾಸಕ ಶಿವಲಿಂಗೇಗೌಡರಿಗೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಸವಾಲು

Promotion

ಹಾಸನ,ಮಾರ್ಚ್,20,2023(www.justkannada.in): ಇತ್ತೀಚೆಗೆ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಮತ್ತು ಮಾಜಿ ಸಚಿವ ಹೆಚ್​.ಡಿ ರೇವಣ್ಣ ನಡುವಿನ ಆಡಿಯೋ ವೈರಲ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್.ಡಿ ರೇವಣ್ಣ ಸವಾಲೊಂದನ್ನ ಹಾಕಿದ್ದಾರೆ.

ಈ ಆಡಿಯೋ ಸಂಬಂಧ  ಮಾತನಾಡಿರುವ ಹೆಚ್‌.ಡಿ.ರೇವಣ್ಣ‌, ಆಡಿಯೋದಲ್ಲಿ ಹೇಳಿರುವುದು ಸತ್ಯ ಅಲ್ಲ ಎಂದು ಶಾಸಕ ಶಿವಲಿಂಗೇಗೌಡರು ಧರ್ಮಸ್ಥಳಕ್ಕೆ ಬಂದು ಸತ್ಯ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಆ ಹುಡುಗ ಆಡಿಯೋ ರೆಕಾರ್ಡ್ ಮಾಡಿಕೊಂಡಿರೋದು ನನಗೆ ಗೊತ್ತಿಲ್ಲ. ಆಡಿಯೋದಲ್ಲಿ ಶಿವಲಿಂಗೇಗೌಡ ಹೇಳಿರೋದು ಸತ್ಯ ಅಲ್ಲ ಅಂಥ ಧರ್ಮಸ್ಥಳಕ್ಕೆ ಬಂದು ಸತ್ಯ ಮಾಡಿಲಿ. ರಾಗಿ ಕಳ್ಳ ಅಂದ ಕೂಡಲೇ ಸತ್ಯ ಮಾಡಲಿಲ್ವಾ. ಕಳೆದ ಒಂದು ವರ್ಷದಿಂದ ಇದು ನಡೆಯುತ್ತಿದೆ. ಕುರುಬರು, ಲಿಂಗಾಯತರು, ಒಕ್ಕಲಿಗರು ನನಗೆ ವೋಟ್ ಹಾಕಲ್ಲ ಎಂದು ಆ ಆಡಿಯೋದಲ್ಲೇ ಹೇಳಿದ್ದಾರೆ. ನಾನೇನಾದರು ಒಂದು ಪದ ಎಡಿಟ್ ಮಾಡಿರೋದನ್ನ ತೋರಿಸಿದರೇ  ಆ ಧರ್ಮಸ್ಥಳದ ಮಂಜುನಾಥ ನನ್ನ‌ನ್ನು ನೋಡಿಕೊಳ್ಳಲಿ. ಇಲ್ಲವಾದರೆ ಆ ದೇವರು ಅವರನ್ನ ನೋಡಿಕೊಳ್ಳಲಿ ಎಂದು ಹೆಚ್.ಡಿ ರೇವಣ್ಣ ವಾಗ್ದಾಳಿ ನಡೆಸಿದರು.

Key words: Audio –viral- issue- Former minister -HD Revanna -challenges -MLA Shivlinge Gowda