ಆತ್ಮಹತ್ಯೆಗೆ ಯತ್ನ ಹಿನ್ನೆಲೆ:  ಸಿಎಂ ಬಿಎಸ್ ವೈ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ವಿರುದ್ಧ ಎಫ್ ಐಆರ್ ದಾಖಲು…

Promotion

ಬೆಂಗಳೂರು, ನವೆಂಬರ್ 28,2020(www.justkannada.in):  ಆತ್ಮಹತ್ಯೆಗೆ ಯತ್ನಿಸಿದ ಹಿನ್ನೆಲೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.I didn't knew CM BSY will think so cheaply - KPCC President D.K. Shivakumar

ಆತ್ಮಹತ್ಯೆಗೆ ಯತ್ನಿಸಿರುವುದು ಕಾನೂನುಬಾಹಿರವಾಗಿರುವ ಹಿನ್ನೆಲೆ  ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎನ್.ಆರ್. ಸಂತೋಷ್  ವಿರುದ್ಧ  ಸೆಕ್ಷನ್ 309 ಅಡಿ ಎಫ್‌ಐಆರ್ ದಾಖಲಾಗಿದೆ. ಸಂತೋಷ್ ರಾಜಕೀಯ ಒತ್ತಡದಿಂದಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆಂಬ ಶಂಕೆ ಕೇಳಿ ಬಂದಿದೆ. attempt- suicide-CM BS Yeddyurappa- Political Secretary -NR Santosh- FIR

ಪತಿಯ ಆತ್ಮಹತ್ಯೆ ಪ್ರಯತ್ನ ಬಗ್ಗೆ ಸಂತೋಷ್‌ ಅವರ ಪತ್ನಿಯಿಂದ  ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ನನ್ನ ಹಾಗೂ ನನ್ನ ಪತ್ನಿ ನಡುವೆ ಯಾವುದೇ ಕಲಹ ಇರಲಿಲ್ಲ. ಸಣ್ಣ ಪುಟ್ಟ ಕಲಹವಿದ್ದರೂ ಅದನ್ನು ಸರಿ ಪಡಿಸಿಕೊಂಡಿದ್ದೆವು. ಇಬ್ಬರ ನಡುವೆ ಇತ್ತೀಚೆಗೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇರಲಿಲ್ಲ. ಇತ್ತೀಚೆಗೆ ಸಂತೋಷ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ನಿದ್ದೆ ಮಾಡುತ್ತಿರಲಿಲ್ಲ. ಹೀಗಾಗಿ ನಿದ್ರೆ ಮಾಡಲು ಅವರು ನಿದ್ರೆ ಮಾತ್ರೆ ಮೊರೆ ಹೋಗುತ್ತಿದ್ದರು ಎಂದು  ಸಂತೋಷ್ ಅವರ ಪತ್ನಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

Key words: attempt- suicide-CM BS Yeddyurappa- Political Secretary -NR Santosh- FIR