ಬಿಜೆಪಿ ಶಾಸಕ ತಿಪ್ಪಾರೆಡ್ಡಿಗೆ ಹನಿಟ್ರ್ಯಾಪ್ ಮಾಡಲು ಯತ್ನ..

Promotion

ಚಿತ್ರದುರ್ಗ,ನವೆಂಬರ್,2,2022(www.justkannada.in):  ಬಿಜೆಪ ಶಾಸಕ ತಿಪ್ಪಾರೆಡ್ಡಿ ಅವರಿಗೆ ಅಪರಿಚಿತ ಯುವತಿ ವಾಟ್ಸಪ್ ವಿಡಿಯೋ ಕಾಲ್ ಮಾಡಿ ಹನಿಟ್ರ್ಯಾಪ್ ಗೆ ಯತ್ನಿಸಿರುವ ಘಟನೆ ನಡೆದಿದೆ.

ಈ ಸಂಬಂಧ ಶಾಸಕ ತಿಪ್ಪಾರೆಡ್ಡಿ ಅವರು ಚಿತ್ರದುರ್ಗ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಕ್ಟೋಬರ್ 31 ರಂದು ಯುವತಿಯೋರ್ವಳು  ಶಾಸಕ ತಿಪ್ಪಾರಡ್ಡಿಗೆ ಬೆತ್ತಲೆಯಾಗಿ ಕಾಲ್  ಮಾಡಿದ್ದು, ನಂತರ ವಾಟ್ಸಪ್ ಗೆ ಅಶ್ಲೀಲ ವಿಡಿಯೋ ಕಳುಹಿಸಿದ್ದಾಳೆ ಎನ್ನಲಾಗಿದೆ.

ಈ ವೇಳೆ ಶಾಸಕ ತಿಪ್ಪರೆಡ್ಡಿ ಅವರು  ತಕ್ಷಣ ಮೊಬೈಲ್ ಅನ್ನ ಪಕ್ಕಕ್ಕೆ ಇಟ್ಟಿರುವುದಾಗಿ ತಿಳಿಸಿದ್ದಾರೆ. ನಂತರ ವಿಡಿಯೋ ಕಾಲ್ ಮಾಡಿದ್ದ ನಂಬರ್ ಅನ್ನ ತಿಪ್ಪಾರೆಡ್ಡಿ ಅವರು ಬ್ಲಾಕ್ ಮಾಡಿದ್ದಾಗಿ ತಿಳಿಸಿದ್ದಾರೆ.  ಈ ಕುರಿತು ಶಾಸಕ ತಿಪ್ಪಾರೆಡ್ಡಿ  ಚಿತ್ರದುರ್ಗ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

Key words: attempt – honeytrap –BJP- MLA- Tippareddy.