ಪ್ರೀತಿ ಹೆಸರಲ್ಲಿ ಯುವತಿ ಮತಾಂತರಕ್ಕೆ ಯತ್ನ: ಯುವಕನ ಬಂಧನ.

Promotion

ಬೆಂಗಳೂರು,ಅಕ್ಟೋಬರ್,14,2022(www.justkannada.in): ಪ್ರೀತಿ ಹೆಸರಲ್ಲಿ ಯುವತಿ ಮತಾಂತರಕ್ಕೆ ಯತ್ನಿಸಿದ ಆರೋಪದ ಮೇಲೆ ಯುವಕನನ್ನ ಯಶವಂತಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಸೈಯದ್  ಮೋಹಿನ್ ಬಂಧಿತ ಆರೋಪಿ.  ಸೈಯದ್  ಮೋಹಿನ್  ವಿರುದ್ಧ ಮತಾಂತರ ನಿಷೇಧ ಕಾಯ್ದೆ 5ರಡಿ ಪ್ರಕರಣ ದಾಖಲಾಗಿದೆ.  ಪ್ರೀತಿ ಹೆಸರಲ್ಲಿ ಯುವತಿಯನ್ನ ಮತಾಂತರ ಮಾಡಿದ್ಧ ಆರೋಪ ಸೈಯದ್ ಮೋಹಿನ್ ವಿರುದ್ಧ ಕೇಳಿಬಂದಿದ್ದು, ಮತಾಂತರ ಆದರೆ ಮದುವೆಯಾಗುವುದಾಗಿ ಸೈಯದ್ ಮೋಹಿನ್ ಯುವತಿಗೆ ಹೇಳಿದ್ದ ಎನ್ನಲಾಗಿದೆ.

ಈ ನಡುವೆ  ಆಕ್ಟೋಬರ್ 5 ರಂದು ಯುವತಿ ಯುವತಿ ಮನೆಯಿಂದ ನಾಪತ್ತೆಯಾಗಿದ್ದು, ಯುವತಿ ಕಾಣಿಯಾದ ಬಗ್ಗೆ ಆಕೆಯ ಪೋಷಕರು  ದೂರು ನೀಡಿದ್ದರು.  ಯಶವಂತಪುರ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಾಗಿತ್ತು.  ನಿನ್ನೆ ಯುವತಿ ಪೋಷಕರು  ಮತಾಂತರ ಎಂದು ದೂರು ನೀಡಿದ್ದರು.

Key words:  Attempt – convert -young woman –accused-arrested.