Promotion
ನವದೆಹಲಿ,ಫೆಬ್ರವರಿ,26,2022(www.justkannada.in): ಉಕ್ರೇನ್ ಮೇಲೆ ಯುದ್ಧ ಸಾರಿ ಸತತ ಮೂರನೇ ದಿನವೂ ದಾಳಿ ಮುಂದುವರೆಸಿರುವ ರಷ್ಯಾ ಉಕ್ರೇನ್ ನ ರಾಜಧಾನಿ ಕೀವ್ ವಶಕ್ಕೆ ಪಡೆಯಲು ಯತ್ನಿಸಿದೆ. ಕೀವ್ ನಗರದ ಆಸ್ಪತ್ರೆ, ಕಟ್ಟಡಗಳ ಮೇಲೆ ಬಾಂಬ್ ದಾಳಿ ನಡೆಸಿ ರಷ್ಯಾ ಅಟ್ಟಹಾಸ ನಡೆಸಿದ್ದು ರಷ್ಯಾದ ನಡೆಯನ್ನ ವಿಶ್ವದ ಹಲವು ರಾಷ್ಟ್ರಗಳು ಖಂಡಿಸಿವೆ.
ಈ ಮಧ್ಯೆ ಹಲವು ರಾಷ್ಟ್ರಗಳು ರಷ್ಯಾ ವಾಯು ಮಾರ್ಗಕ್ಕೆ ನಿರ್ಬಂಧ ಹೇರಿವೆ. ಪೋಲೆಂಡ್ , ಜೆಕ್ ರಿಪಬ್ಲಿಕ್ ಬಲ್ಗೇರಿಯಾದಲ್ಲೂ ರಷ್ಯಾ ವಿಮಾನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಈ ನಡುವೆ ಉಕ್ರೇನ್ ನಲ್ಲಿ ಸತತ ದಾಳಿ ಮುಂದುವರೆಸಿರುವ ರಷ್ಯಾ ಉಕ್ರೇನ್ ಸುತ್ತ ಮತ್ತಷ್ಟು ಸೇನೆ ನಿಯೋಜಿಸಿದೆ.
ಇನ್ನು ಸೈಬರ್ ದಾಳಿ ಸಾಧ್ಯತೆ ಇರುವ ಹಿನ್ನೆಲೆ ರಷ್ಯಾ ಸರ್ಕಾರದ ಎಲ್ಲಾ ವೆಬ್ ಸೈಟ್ ಸ್ಥಗಿತಗೊಂಡಿದೆ. ಯುದ್ಧದಿಂದ ತತ್ತರಿಸಿರುವ ಉಕ್ರೇನ್ ಗೆ ಅಮೇರಿಕಾ 600 ಮಿಲಿಯನ್ ಡಾಲರ್ ಆರ್ಥಿಕ ನೆರವು ನೀಡಿದೆ ಎನ್ನಲಾಗಿದೆ.
Key words: attack-Ukraine- Russia- air route