ಕೊರೊನಾ ಜಾಗೃತಿಗೆ ಕ್ರೀಡಾಪಟುಗಳ ‘ಸೇಫ್ ಹ್ಯಾಂಡ್’ ಅಭಿಯಾನ

Promotion

ಬೆಂಗಳೂರು, ಮಾರ್ಚ್ 19, 2020 (www.justkannada.in): ಇಷ್ಟು ದಿನ ಆನ್​ಫಿಲ್ಡ್​​​​ನಲ್ಲಿ ಎದುರಾಳಿ ವಿರುದ್ಧ ಹೋರಾಟ ನಡೆಸ್ತಿದ್ದ ಕ್ರೀಡಾಪಟುಗಳು ಕಣ್ಣಿಗೆ ಕಾಣದ ಹೆಮ್ಮಾರಿಗೆ ಸೋಲಿಸಲು ಚಾಲೆಂಜ್ ಹಾಕುತ್ತಿದ್ದಾರೆ.

ಆಲ್​ಮೋಸ್ಟ್​ ಎಲ್ಲಾ ಕ್ರಿಕೆಟಿಗರು ಹಾಗೂ ಕ್ರೀಡಾಪಟುಗಳು ಆನ್​​ಲೈನ್​​ನಲ್ಲಿ ಕಾಲಕಳೆಯುವಂತೆ ಆಗಿದೆ. ಆನ್​ಲೈನ್​​ನಲ್ಲಿ ಕಾಲಕಳೆಯುತ್ತಿದ್ದಾರೆ. ಸುಮ್ಮನೆ ಕಾಲ ಕಳೆಯೋದರ ಜೊತೆಗೆ ಕೊರೊನಾ ಸೋಂಕು ವಿರುದ್ಧ ಹೋರಾಟಕ್ಕೆ ಸೇಫ್ ಹ್ಯಾಂಡ್ ಅಭಿಯಾನಕ್ಕೆ ಕೈಜೋಡಿಸಿದ್ದಾರೆ.

ಇಷ್ಟೇ ಅಲ್ಲ ಇತರರಿಗೂ ಸೇಫ್ ಹ್ಯಾಂಡ್​​​​​​​​​​​​​​ ಚಾಲೆಂಜ್ ಎಸೆದು ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮಾಡ್ತಿದ್ದಾರೆ. ಶುಚಿತ್ವಕ್ಕೆ ಪ್ರಾಮುಖ್ಯತೆ ನೀಡುವ ನಿಟ್ಟಿನಲ್ಲಿ ಕ್ರೀಡಾಪಟುಗಳು ಸೇಫ್​ಹ್ಯಾಂಡ್ ಚಾಲೆಂಜ್​​​​ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.