ಕಳೆದ ಬಾರಿ ಇದ್ದ ಸರ್ಕಾರ ಕೇವಲ ನಾಲ್ಕು ಜನರಿಗೆ ಮಾತ್ರ ಸೀಮಿತ: ಮಾಜಿ ಪ್ರಧಾನಿ ಹೆಚ್.ಡಿಡಿ ಕುಟುಂಬದ ವಿರುದ್ದ ಮಾಜಿ ಸಚಿವ ಎ.ಮಂಜು ಮತ್ತೆ ವಾಗ್ದಾಳಿ…

ಮೈಸೂರು,ಆ,23,2019(www.justkannada.in): ರಾಜ್ಯ ಸಮ್ಮಿಶ್ರ ಸರ್ಕಾರ ಬೀಳಲು ಸಿದ್ಧರಾಮಯ್ಯ ಕಾರಣ ಎಂದು ಹೆಚ್.ಡಿ ದೇವೇಗೌಡರ ಆರೋಪ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಎ. ಮಂಜು,  ಸಿದ್ರಾಮಣ್ಣ  ಮತ್ತು ಕಾಂಗ್ರೆಸ್ ಇಬ್ಬರಿಗೂ  ಈಗ ಅರ್ಥವಾಗಿದೆ. ದೇವೇಗೌಡರ ಕುಟುಂಬ ಏನೂ ಅಂತ ಎಂದು ಲೇವಡಿ ಮಾಡಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಬಿಜೆಪಿ ಮುಖಂಡ ಎ,ಮಂಜು,  ಕಳೆದ ಬಾರಿ ಇದ್ದ ಸರ್ಕಾರ ಕೇವಲ ನಾಲ್ಕು ಜನರಿಗೆ ಇದ್ದ ಸರ್ಕಾರ. ಹೆಚ್.ಡಿ ಕುಮಾರಸ್ವಾಮಿ, ಹೆಚ್.ಡಿ ರೇವಣ್ಣ, ಪರಮೇಶ್ವರ್, ಡಿಕೆ ಶಿವಕುಮಾರ್ ಅವರಿಗೆ ಮಾತ್ರ ಆ ಸರ್ಕಾರ. ಆ ಸರ್ಕಾರದಲ್ಲಿ ಯಾವ ಕಾಂಗ್ರೆಸ್ ಅಥವಾ ಜೆಡಿಎಸ್ ಶಾಸಕರಿಗೆ ಉಪಯೋಗ ಆಗಿಲ್ಲ.ಅದೊಂದು ಸಿಂಗಲ್ ವಿಂಡೋ ಸರ್ಕಾರ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ಸರ್ಕಾರ ಬಿಳುತ್ತಿರಲಿಲ್ಲ. ಮೈತ್ರಿ ಸರ್ಕಾರ ಬಿಳಲು ಯಾರು ಕಾರಣರಲ್ಲ ಅವರವರೇ ಕಾರಣ ಎಂದರು.

ಅವರ ಜೊತೆ ಹೋದ್ರೆ ಏನಾಗುತ್ತೆ ಅಂತ ಸಿದ್ರಾಮಣ್ಣಗೆ ಮೊದಲೆ ಹೇಳಿದ್ದೆ. ಈಗ ಅವರಿಗೆ ಅರ್ಥ ಆಗಿದೆ ನಾನೇನು ಹೇಳಿದ್ದೆ ಅಂತ. ರೇವಣ್ಣನ ಮಾತು ಕೇಳಿಕೊಂಡು ಅರಕಲಗೂಡಿಗೆ ಸಿದ್ಧರಾಮಯ್ಯ ಬಂದಿದ್ರು. ಬಂದು ನನ್ನ ಬಗ್ಗೆ ಸಿಂಗಲ್ ವರ್ಡ್ ಬಳಸಿ ಮಾತನಾಡಿದ್ದರೂ ಸಿದ್ರಾಮಣ್ಣನಿಗೆ ಈಗ ಅದು ತಪ್ಪು ಅಂತ ಅರ್ಥವಾಗಿದ್ದರೇ ಸಾಕು. ಅದೆ ನನಗೆ ಸಂತೋಷ. ಸಿದ್ರಾಮಣ್ಣ ಈಗ ಮಾತನಾಡುತ್ತಿರೋದು ರೈಲು ಹೋದ ಮೇಲೆ ಟಿಕೆಟ್ ಪಡೆದಂತೆ. ಈಗ ಮಾತನಾಡಿ ಪ್ರಯೋಜನ ಇಲ್ಲ. ಸಿದ್ರಾಮಣ್ಣ ಅಥವಾ ಕಾಂಗ್ರೆಸ್ ಇಬ್ಬರಿಗು ಈಗ ಅರ್ಥವಾಗಿದೆ. ದೇವೇಗೌಡರ ಕುಟುಂಬ ಏನೂ ಅಂತ ಎಂದು  ಟೀಕಿಸಿದರು.

ಸಿದ್ರಾಮಣ್ಣ ತಮ್ಮ ಸಿದ್ದಾಂತವನ್ನ ಬಲಿಕೊಟ್ಟಿರಲಿಲ್ಲ. ಬದಲಿಗೆ ಹೈಕಮಾಂಡ್ ಆದೇಶದಕ್ಕೆ ಸುಮ್ಮನಿದ್ದರು ಅಷ್ಟೇ. ದೇವೇಗೌಡರ ಕುಟುಂಬದ ಬಗ್ಗೆ ಸಿದ್ರಾಮಣ್ಣನಿಗೆ ಗೊತ್ತಿತ್ತು. ದೇವೇಗೌಡರು ಯಾವತ್ತು ಅವರ ಮಗನನ್ನ ಸಿಎಂ ಮಾಡಿಲ್ಲ. ಒಂದು ಬಾರಿ ಬಿಜೆಪಿ ಕುಮಾರಸ್ವಾಮಿರನ್ನ ಸಿಎಂ ಮಾಡಿತು. ಇನ್ನೊಮ್ಮೆ ಕಾಂಗ್ರೆಸ್ ಹೈಕಮಾಂಡ್ ಕುಮಾರಸ್ವಾಮಿರನ್ನ ಸಿಎಂ ಮಾಡಿತು.ಆದ್ರೆ ಸಿಎಂ ಆದವರು ಹೇಗೆ ಇರಬೇಕು ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು. ಅದು ಬಿಟ್ಟು ಏಕಾಂಗಿ ನಿರ್ಧಾರ ತಗೊಂಡು ಎಲ್ಲರ ಅಸಮಾಧಾನಕ್ಕೆ ಕಾರಣವಾದ್ರು. ಈಗ ಅತೃಪ್ತರು ಅಂತ ಇರೋರೆಲ್ಲ ಅವರಿಗೆ ಬೇಜಾರಾಗಿ ಬಂದಿರೋದು. ಅತೃಪ್ತರ ನಡೆಯೇ ತಿಳಿಸುತ್ತೆ ಕುಮಾರಸ್ವಾಮಿ ಆಡಳಿತ ಹೇಗಿತ್ತು ಅಂತ. ದೇವೇಗೌಡರಿಗೆ ಅವರ ಕುಟುಂಬಸ್ಥರು ಮಾತ್ರ ರಾಜಕೀಯದಲ್ಲಿ ಇರಬೇಕು ಅನ್ನೋದೆ ಉದ್ದೇಶ. ಈಗ ಉಪಚುನಾವಣೆಯಲ್ಲಿ ನೋಡಿ ಅವರ ಕುಟುಂಬದ ಎಷ್ಟು ಜನರಿಗೆ ಟಿಕೆಟ್ ಕೊಡ್ತಾರೆ ಅಂತ ಎಂದು ಮತ್ತೆ ದೇವೇಗೌಡರ ಕುಟುಂಬದ ವಿರುದ್ದ ಎ.ಮಂಜು ವಾಗ್ದಾಳಿ ನಡೆಸಿದರು.

ದೇವೇಗೌಡರು ಅವರ ಮಗನಿಗೆ ಅಧಿಕಾರ ಹೋಗಿದೆ ಅಂತ ಹೀಗೆ ಮಾತನಾಡುತ್ತಿದ್ದಾರೆ. ಅವರ ಮಗನ ಅಧಿಕಾರವನ್ನ ಯಾರು ಕಿತ್ತುಕೊಂಡಿಲ್ಲ. ಕೊಟ್ಟ ಅಧಿಕಾರವನ್ನ ನಡೆಸಲಾಗದೆ ಕೇಳಗೆ ಇಳಿದಿದ್ದಾರೆ ಎನ್ನಬಹುದು. ಈಗ ಅದಕ್ಕೆ ಅವರು ಕಾರಣ ಇವರು ಕಾರಣ ಎನ್ನುತ್ತಿದ್ದಾರೆ. ಮೈತ್ರಿ ಸರ್ಕಾರ ಬಿಳೋದಕ್ಕೆ ಬಿಜೆಪಿ ಕಾರಣವೇ ಅಲ್ಲ ಎಂದರು.

ಪೋನ್ ಕದ್ದಾಲಿಕೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಎ.ಮಂಜು, ಯಾರು ಆದೇಶ ಕೊಟ್ಟಿದ್ದಾರೋ ಅವರ ಮೇಲೆ ಮೊದಲು FIR ಆಗಲಿ. ಸಿಬಿಐ ತನಿಖೆಗಿಂತ ಮೊದಲು ರಾಜ್ಯದಲ್ಲಿ ತನಿಖೆ ಆಗಲಿ ಎಂದು  ಪರೋಕ್ಷವಾಗಿ ಕುಮಾರಸ್ವಾಮಿ ಮೇಲೆ FIR ದಾಖಲಿಸುವಂತೆ ಆಗ್ರಹಿಸಿದರು.

ದೇವೇಗೌಡರು ಮೊನ್ನೆ ಎಲ್ಲೋ ಪೋನ್‌ ಕದ್ದಾಲಿಕೆ ಮಾಡಬಹುದು ಅಂತ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಅಲ್ಲೆ ಆದೇಶ ಇದೆ ಅಂತ ಹೇಳಿದ್ದಾರೆ. ಮಾಜಿ ಪ್ರಧಾನಿಯೋಬ್ಬರು ಈ ರೀತಿ ಜನರ ದಾರಿ ತಪ್ಪಿಸಬಾರದು. ಅದ್ಯಾವ ಕೋರ್ಟ್‌ ಅಲ್ಲಿ ಹೇಳಿದೆ ಅಂತ ಸ್ವಲ್ಪ ತೋರಿಸಿಬಿಡಿ ಸರ್ ಎಂದು ಎ. ಮಂಜು ಲೇವಡಿ ಮಾಡಿದರು.

ಪೋನ್ ಕದ್ದಾಲಿಕೆ ಯಾರೇ ಮಾಡಿದ್ದರು ತಪ್ಪು. ದೇಶದ್ರೋಹಿಗಳ ಪೋನ್ ಕದ್ದಾಲಿಕೆ ಮಾಡಬೇಕಾದ್ರು ಅನುಮತಿ ಬೇಕಾಗಿದೆ. ಇಂತದ್ರಲ್ಲಿ ಪೋನ್ ಕದ್ದಾಲಿಕೆ ಮಾಡಬಹುದು ಅಂತ ಮಾಜಿ ಪ್ರಧಾನಿಯೋಬ್ಬರು ಹೇಳಬಹುದಾ.? ಎಂದು ಎ. ಮಂಜು ಪ್ರಶ್ನಿಸಿದರು.

Key words:  last time -government – only- four people-mysore-Former minister- A Manju