“ವಿದ್ಯಾರ್ಥಿ ಕ್ಷೇಮಪಾಲನಾ ಸಹಾಯಕ ನಿರ್ದೇಶಕ ಡಾ.ಜೆ.ಲೋಹಿತ್‌ ಗೆ ಶಿಕ್ಷಾ ಭಾರತಿ ಪ್ರಶಸ್ತಿ”

Promotion

ಮೈಸೂರು,ಮಾರ್ಚ್,20,2021(www.justkannada.in) : ಮೈಸೂರು ವಿಶ್ವವಿದ್ಯಾಲಯ ವಿದ್ಯಾರ್ಥಿ ಕ್ಷೇಮಪಾಲನಾ ಸಹಾಯಕ ನಿರ್ದೇಶಕ ಡಾ.ಜೆ.ಲೋಹಿತ್ ಅವರಿಗೆ 2020-21ನೇ ಸಾಲಿನ ‘ಶಿಕ್ಷಾ ಭಾರತಿ’ ಲಭಿಸಿದೆ.jkಡಾ.ಲೋಹಿತ್ ಅವರ ಶೈಕ್ಷಣಿಕ ಸಾಧನೆ ಪರಿಗಣಿಸಿ ಇಂಡಿಯನ್ ಅರ್ಚೀವರ್ಸ್‌ ಫೋರಂ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯ, ಫ್ರಾನ್ಸ್, ಸ್ವಿಟ್ಜರ್‌ಲ್ಯಾಂಡ್ ಸೇರಿದಂತೆ 14 ದೇಶಗಳ 82 ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳು ನಡೆಸುವ ವೃತ್ತಿಪರ ಆನ್‌ಲೈನ್ ಕೋರ್ಸ್‌ಗಳಲ್ಲಿ ಡಾ.ಲೋಹಿತ್ ಉತ್ತೀರ್ಣರಾಗಿದ್ದಾರೆ.Assistant-Director-Student-Wellness-Dr.J.Lohit-Shiksha Bharati Award 

ಇವುಗಳಲ್ಲಿ ಹಾರ್ವಡ್ ವಿಶ್ವವಿದ್ಯಾಲಯ, ಯೇಲ್ ವಿಶ್ವವಿದ್ಯಾಲಯ, ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ, ಮ್ಯಾನ್‌ಚೆಸ್ಟರ್ ವಿಶ್ವವಿದ್ಯಾಲಯ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುಂತಾದವುಗಳು ಸೇರಿವೆ.

Assistant-Director-Student-Wellness-Dr.J.Lohit-Shiksha Bharati Award 

ಶೈಕ್ಷಣಿಕ ನಾಯಕತ್ವ, ದತ್ತಾಂಶ ನಿರ್ವಹಣೆ, ಉದ್ಯಮಶೀಲತೆ, ವೃತ್ತಿ ಕೌಶಲ್ಯ ಮತ್ತು ಮಾರ್ಗದರ್ಶನಕ್ಕೆ ಸಂಬಂಧಿಸಿದಂತೆ ದಾಖಲೆ ಪ್ರಮಾಣದ 189 ಆನ್‌ಲೈನ್ ಕೋರ್ಸ್‌ಗಳನ್ನು ಅತ್ಯುನ್ನತ ದರ್ಜೆಯೊಂದಿಗೆ ಪೂರ್ಣಗೊಳಿಸಿದ್ದಾರೆ. ಈ ಸಾಧನೆಯನ್ನು ಗುರುತಿಸಿ ‘ಶಿಕ್ಷಾ ಭಾರತಿಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ENGLISH SUMMARY….

Shiksha Bharathi award for Student Welfare Assistant Director Dr. J. Lohith
Mysuru, Mar. 20, 2021 (www.justkannada.in): Dr. J. Lohith, Assistant Director, Student Welfare, University of Mysore has earned the ‘Shiksha Bharathi’ award for the year 2020-21.
The award is announced by the Indian Achievers Forum, recognizing Dr. Lohith’s achievements in the educational sector. Dr. Lohith has passed the professional online courses conducted by 82 reputed Universities and Educational Institutions from 14 different countries including America, England, Australia, France, and Switzerland.Assistant-Director-Student-Wellness-Dr.J.Lohit-Shiksha Bharati Award 
It also includes the prestigious Harvard University, Yale University, Stanford University, Manchester University, and Oxford University. Dr. Lohith has completed a record 189 online courses in various subjects including educational leadership, data management, entrepreneurship, vocational skills, and guidance, with the highest score. The ‘Shiksha Bharathi’ award is being bestowed upon him recognizing this achievement.
Keywords: Dr. Lohith/ Student Welfare Department/ University of Mysore/ Shiksha Bharathi award

key words : Assistant-Director-Student-Wellness-Dr.J.Lohit-Shiksha Bharati Award