ಆಟೋ ಓಡಿಸುತ್ತಿದ್ದ ಜಿಲ್ಲಾ ಆರ್ ಸಿಹೆಚ್ ಅಧಿಕಾರಿಗೆ ಹುದ್ದೆ ನಿಯೋಜನೆ- ಆರೋಗ್ಯ ಸಚಿವ ಶ್ರೀರಾಮುಲು

Promotion

ಬೆಂಗಳೂರು,ಸೆಪ್ಟಂಬರ್,10,2020(www.justkannada.in):  ಬದುಕು ನಿರ್ವಹಣೆಗಾಗಿ ಆಟೋ ಓಡಿಸುತ್ತಿದ್ದ ಜಿಲ್ಲಾ ಆರ್ ಸಿಹೆಚ್ ಅಧಿಕಾರಿ ಡಾ. ಎಂ ಎಚ್ ರವೀಂದ್ರನಾಥ್ ಅವರನ್ನ ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ನಿಯೋಜಿಸಲಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಚಿವ ಶ್ರೀರಾಮುಲು,  ಜಿಲ್ಲಾ ಆರ್ ಸಿಹೆಚ್ ಅಧಿಕಾರಿ ಡಾ. ಎಂ ಎಚ್ ರವೀಂದ್ರನಾಥ್ ಅವರು ದಾವಣಗೆರೆಯಲ್ಲಿ ಬದುಕು ನಿರ್ವಹಣೆಗಾಗಿ ಆಟೋ ಓಡಿಸುತ್ತಿದ್ದಾರೆ ಎಂಬ ಮಾಧ್ಯಮ ವರದಿಗಳು ಗಮನಕ್ಕೆ ಬಂದ ಕೂಡಲೇ ಈ ಬಗ್ಗೆ ಹಿರಿಯ ಅಧಿಕಾರಿಗಳಿಂದ ವರದಿ ಕೇಳಿದ್ದೆ. ಅಂತೆಯೇ ವರದಿ ಪರಿಶೀಲನೆ ಬಳಿಕ ರವೀಂದ್ರನಾಥ್ ಅವರನ್ನು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. Assignment - post to -District RCH officer-  Auto - Health Minister -Sriramulu.

ಹಾಗೆಯೇ ಹಗಲಿರುಳು ಶ್ರಮಿಸುವ ಎಲ್ಲಾ ವೈದ್ಯರ ಹಿತಾಸಕ್ತಿ ಕಾಪಾಡಲು ನಮ್ಮ ಸರ್ಕಾರ ಬದ್ಧ ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಐಎಎಸ್ ಅಧಿಕಾರಿಗಳ ನಡೆಯಿಂದ ವೈದ್ಯಾಧಿಕಾರಿ ಎಂ ಎಚ್ ರವೀಂದ್ರನಾಥ್ ಅವರು ಬೇಸತ್ತಿದ್ದರು ಎನ್ನಲಾಗಿದೆ.

Key words: Assignment – post to -District RCH officer-  Auto – Health Minister -Sriramulu.