ನನ್ನ ತಂದೆ,ತಾಯಿ ಪೂರ್ವಿಕರ ದಾಖಲೆ ಕೇಳಿದ್ರೆ ಎಲ್ಲಿಂದ ತಂದು ಕೊಡೋದು- ವಿಧಾನಸಭೆಯಲ್ಲಿ ಯು.ಟಿ ಖಾದರ್ ಪ್ರಶ್ನೆ…

ಬೆಂಗಳೂರು,ಮಾ,9,2020(www.justkannada.in):  ಪೌರತ್ವ ತಿದ್ದುಪಡಿಕಾಯ್ದೆ, ಎನ್ ಆರ್ ಸಿಯಲ್ಲಿ ಗೊಂದಲವಿದೆ.  ಜನಗಣತಿಗೆ ವಿರೋದವಿಲ್ಲ ಆದರೆ ನನ್ನ ತಂದೆ,ತಾಯಿ ಪೂರ್ವಿಕರ ದಾಖಲೆ ಕೇಳಿದ್ರೆ ಎಲ್ಲಿಂದ ತಂದು ಕೊಡೋದು ಎಂದು ಮಾಜಿ ಸಚಿವ ಯು.ಟಿ ಖಾದರ್ ಪ್ರಶ್ನಿಸಿದರು.

ವಿಧಾನಸಭೆಯಲ್ಲಿ ಇಂದು ಸಂವಿಧಾನ ಕುರಿತು ಚರ್ಚೆಯಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ದ ಕಿಡಿಕಾರಿದ ಅವರು, ಪೌರತ್ವ ತಿದ್ದುಪಡಿಕಾಯ್ದೆ, ಎನ್ ಆರ್ ಸಿಯಲ್ಲಿ ಗೊಂದಲವಿದೆ. ಜನರಿಗೆ ಶಿಕ್ಷಣ, ಆರೋಗ್ಯ ಬೇಕೆ ಹೊರತು ಇದಲ್ಲ. ಹಸಿದವರಿಗೆ ಅನ್ನ. ಸೂರಿಲ್ಲದವರಿಗೆ ಸೂರು ಕೊಡಬೇಕು. ಆದರೆ ಸರ್ಕಾರ ಏನೇನೋ ಕೇಳುತ್ತಿದೆ ಎಂದು ಹರಿಹಾಯ್ದರು.

Keywords: assembly- former minister-u.t khadar