ತಂದೆಗಾಗಿ ಕ್ಷೇತ್ರ ತ್ಯಾಗ ಮಾಡಿದ ಮೈಸೂರು ಪುತ್ರರು.

kannada t-shirts

ಬೆಂಗಳೂರು,ಮಾರ್ಚ್,25,2023(www.justkannada.in): ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಅದರಲ್ಲಿ ಉದಹರಿಸಬಹುದಾದ ಅಥವಾ ನವೀನತೆಯಿಂದ ಕೂಡಿದ ವಿಶೇಷಗಳೇನೂ ಕಾಣಿಸಲಿಲ್ಲ. ಬಹುತೇಕ ವಿಧಾನ ಸಭೆಯ ಸದಸ್ಯರು, ಕಳೆದ ಬಾರಿ ಸೋತವರಿಗೆ ಟಿಕೆಟ್ ನೀಡಲಾಗಿದೆ.

ಒಂದೆರಡು ಕ್ಷೇತ್ರಗಳನ್ನು ಇಲ್ಲಿ ಉಲ್ಲೇಖಿಸಲೇಬೆಕು. ಅವುಗಳೆಂದರೇ ವರುಣಾ ಮತ್ತು ಟಿ. ನರಸೀಪುರ ಕ್ಷೇತ್ರಗಳು. ಈ ಎರಡೂ ಕ್ಷೇತ್ರಗಳಲ್ಲಿ ಪುತ್ರರು ತಮ್ಮ ತಮ್ಮ ತಂದೆಯವರ ರಾಜಕೀಯ ಭವಿಷ್ಯಕ್ಕೆ ತಮ್ಮ ರಾಜಕೀಯ ಭವಿಷವನ್ನು ಬದಿಗಿಟ್ಟಿದ್ದಾರೆ. ವರುಣಾದಲ್ಲಿ ಶಾಸಕರಾಗಿರುವ ಯತೀಂದ್ರ ಸಿದ‍್ಧರಾಮಯ್ಯ ತಮ್ಮ ತಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಕ್ಷೇತ್ರ ಹುಡುಕಾಟಕ್ಕೆ ಚರಮಗೀತೆ ಹಾಡಿ, ತಮ್ಮ ಕ್ಷೇತ್ರ ತ್ಯಾಗ ಮಾಡಿದ್ದಾರೆ.

ಇನ್ನು ಟಿ.ನರಸೀಪುರದಲ್ಲಿ ಸ್ಪರ್ಧಿಸಿ  ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸುವ ಕನಸು ಕಂಡಿದ್ದ ಸುನೀಲ ಬೊಸ್ ಕನಸು ಭಗ್ನವಾಗಿದೆ. ಅವರೂ ಸಹ ತಮ್ಮ ತಂದೆಗಾಗಿ ಕ್ಷೇತ್ರವನ್ನು ತ್ಯಾಗ ಮಾಡುವಂತಾಗಿದೆ. ಅವರ ತಂದೆ ಹೆಚ್ ಸಿ ಮಹದೇವಪ್ಪ ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸಲು ಸಜ್ಜಾಗಿದ್ದರು. ದುರಾದೃಷ್ಟವಶಾತ್  ಆರ್. ಧೃವ ನಾರಾಯಣ್ ನಿಧನದಿಂದ ಅವರ ಪುತ್ರ ದರ್ಶನ್ ಗೆ ಆ ಕ್ಷೇತ್ರ ಬಿಡಬೇಕಾಯಿತು.

ಸಿದ್ದರಾಮಯ್ಯನವರು ಮತ್ತೊಂದು ಕ್ಷೇತ್ರದಲ್ಲಿ ಸೆಣಸಲು ಅಣಿಯಾಗಿದ್ದಾರೆ. ತಮ್ಮ ಮಗ ಬಿಟ್ಟುಕೊಟ್ಟ ಕ್ಷೇತ್ರವನ್ನು ಮರಳಿ ನೀಡುವ ಉದ್ದೇಶವೂ ಇದರಲ್ಲಿ ಅಡಗಿದೆ.  ಆದರೆ ಅವರು ಎರಡೂ ಕ್ಷೇತ್ರಗಳಲ್ಲೂ ಗೆಲ್ಲಲೇಬೇಕು.

 

ಎಂ.ಸಿದ್ಧರಾಜು

ಹಿರಿಯ ಪತ್ರಕರ್ತರು

ಬೆಂಗಳೂರು .

Key words: assembly -constituency –varuna-T.Narasipur-siddaramaiah-HC Mahadevappa

website developers in mysore