ರಾಜಕೀಯಕ್ಕೆ ಎಂಟ್ರಿ ಕುರಿತು ಸ್ಪಷ್ಟನೆ ನೀಡಿದ ರಿಷಬ್ ಶೆಟ್ಟಿ

Promotion

ಬೆಂಗಳೂರು, ಫೆಬ್ರವರಿ 12, 2023 (www.justkannada.in): ಸದ್ಯಕ್ಕೆ ನಾನು ರಾಜಕೀಯಕ್ಕೆ ಎಂಟ್ರಿ ಕೊಡುವುದಿಲ್ಲ ಎಂದು ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಸ್ಪಷ್ಟವಾಗಿ ಹೇಳಿದ್ದಾರೆ.

ಕಾಂತಾರ ಚಿತ್ರದ ಭಾರಿ ಯಶಸ್ಸಿನ ಬಳಿಕ ರಿಷಬ್‌ ಶೆಟ್ಟಿ ರಾಜಕೀಯ ಪ್ರವೇಶ ಮಾಡ್ತಾರೆ ಎಂಬ ಮಾತುಗಳು ಜೋರಾಗಿಯೇ ಕೇಳಿಬರುತ್ತಿವೆ. ಈ ಕುರಿತು ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ.

ರಾಜಕೀಯಕ್ಕೆ ಬಂದೇ ಸಮಾಜದಲ್ಲಿ ಬದಲಾವಣೆ ತರಬೇಕು ಅಂತೇನಿಲ್ಲ. ಸದ್ಯಕ್ಕೆ ನಾನು ರಾಜಕೀಯಕ್ಕೆ ಎಂಟ್ರಿ ಕೊಡುವುದಿಲ್ಲ ಎಂದಿದ್ದಾರೆ.

ರಾಜಕೀಯ ಪ್ರವೇಶದ ಆಸೆ ಸದ್ಯಕ್ಕೆ ನನಗೆ ಇಲ್ಲ. ಆದರೆ ಕೆಲವರು ನನಗೆ ಈಗಾಗಲೇ ಮೂರು ಪಕ್ಷಗಳಿಂದಲೂ ಟಿಕೆಟ್ ಕೊಡಿಸಿದ್ದಾರೆ  ಎಂದು ತಮಾಷೆ ಮಾಡಿದ್ದಾರೆ.