ರಾಜ್ಯದ ನೆರೆ ಪರಿಸ್ಥಿತಿ ನಿರ್ವಹಣೆಗೆ 10 ಸಾವಿರ ಕೋಟಿ ಕೇಳಿದ್ದೇವೆ-ಮಾಜಿ ಡಿಸಿಎಂ ಆರ್. ಅಶೋಕ್ ಹೇಳಿಕೆ…

ನವದೆಹಲಿ,ಆ,16,2019(www.justkannada.in): ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಹತ್ತು ಸಾವಿರ ಕೋಟಿ ರೂ ನೆರವು ಕೋರಲಾಗಿದೆ. ಮೊದಲ ಹಂತದಲ್ಲಿ ಎರಡು ಸಾವಿರ ‌ಕೋಟಿ ರೂ ಬಿಡುಗಡೆ ಮಾಡುವ ವಿಶ್ವಾಸವಿದೆ ಎಂದು ಬಿಜೆಪಿ ಶಾಸಕ ಆರ್.ಅಶೋಕ್ ತಿಳಿಸಿದರು.

ಸಿಎಂ ಬಿಎಸ್ ಯಡಿಯೂರಪ್ಪ ಜತೆ ಪ್ರಧಾನಿ ಮೋದಿ ಅವರನ್ನ ಭೇಟಿಯಾಗಿ ನೆರೆ ಪರಿಹಾರಕ್ಕೆ ಮನವಿ ಮಾಡಿದ ಬಳಿಕ ಮಾತನಾಡಿದ  ಮಾಜಿ ಡಿಸಿಎಂ ಆರ್.ಅಶೋಕ್, ಪ್ರವಾಹ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಸಂಬಂಧ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಮಾಹಿತಿ‌ ಯನ್ನು ಪ್ರಧಾನಿ ಅವರಿಗೆ ತಿಳಿಸಲಾಗಿದೆ. ಐದು ಲಕ್ಷ ದಲ್ಲಿ ಮನೆ ನಿರ್ಮಾಣ ಸಾದ್ಯವೇ ಎಂಬ ಪ್ರಶ್ನೆಯನ್ನು ಮೋದಿ ಪ್ರಸ್ತಾಪಿಸಿದ್ದಾರೆ. ರಾಜ್ಯ ಕೈಗೊಂಡಿರುವ ಪರಿಹಾರ ಕೆಲಸಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇಂದ್ರದಿಂದ ಆದಷ್ಟು ಶೀಘ್ರವಾಗಿ ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ ನೀಡಿ ಪೂರ್ಣ ಪ್ರಮಾಣದ ವರದಿ‌ ನೀಡಲಿದ್ದು ಸೂಕ್ತ ಪರಿಹಾರ ದೊರೆಯುವ ವಿಶ್ವಾಸವಿದೆ ಎಂದರು.

ಸಿಎಂ.‌ ಪ್ರವಾಹದಿಂದ ಹಾಳಾಗಿರುವ ರಸ್ತೆ, ಸೇತುವೆಗಳ ಪುನರ್ ನಿರ್ಮಾಣ ಸೇರಿದಂತೆ ತುರ್ತು ಕಾರ್ಯಗಳಿಗೆ ಮಧ್ಯಂತರ ಪರಿಹಾರ ಬಿಡುಗಡೆಗೆ ಪ್ರಧಾನಿಗೆ ಮನವಿ ಮಾಡಲಾಗಿದ್ದು ಅವರು ಸಕಾರಾತ್ಮಕ ವಾಗಿ ಸ್ಪಂದಿಸಿದ್ದಾರೆ ಎಂಧು ಆರ್ .ಅಶೋಕ್ ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆ ಕುರಿತು ನಾಳೆ‌ ಅಮಿತ್ ಷಾ ಜತೆ ಮಾತುಕತೆ ನಡೆಸಲಾಗುವುದು. ಸಂಪುಟಕ್ಕೆ ಯಾರು ಸೇರ್ಪಡೆ ಯಾಗಬೇಕು ಎಂಬುದನ್ನು ವರಿಷ್ಟರು ತೀರ್ಮಾನಿಸಲಿದ್ದಾರೆ ಎಂದು ಆರ್. ಅಶೋಕ್ ಮಾಹಿತಿ ನೀಡಿದರು.

Key words: asked – Rs 10,000 crore – management – Neighborhood situation -Former DCM-R Ashok