ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರಗೆ ಅಶ್ವಿನ್ ‘ಮೀಸೆ’ ಚಾಲೆಂಜ್ !

Promotion

ಬೆಂಗಳೂರು, ಜನವರಿ 27, 2021 (www.justkannada.in): ಟೆಸ್ಟ್​​ ಸ್ಪೆಷಲಿಸ್ಟ್​ ಚೇತೇಶ್ವರ್​​ ಪೂಜಾರ, ಆಸಿಸ್​ ಸರಣಿ ಬಳಿಕ ಹೆಚ್ಚು ಚರ್ಚೆಯಲ್ಲಿರೋ ಬ್ಯಾಟ್ಸ್​ಮನ್​​. ಇದೀಗ ಟೀಮ್​ ಇಂಡಿಯಾ ಆಫ್​​ ಸ್ಪಿನ್ನರ್​​​ ರವಿಚಂದ್ರನ್​​ ಅಶ್ವಿನ್​​, ಪೂಜಾರಗೆ ಹೊಸ ಚಾಲೆಂಜ್ ನೀಡಿದ್ದಾರೆ!

ಯೆಸ್, ಇಂಗ್ಲೆಂಡ್​‌ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಮೊಯಿನ್​​‌ ಅಲಿ ಅಥವಾ ಬೇರೆ ಸ್ಪಿನ್ನರ್​‌ ಮುಂದೆ ಬಂದು ಓವರ್​​ ದ ಟಾಪ್​​​ ಶಾಟ್​​​ ಪ್ಲೇ ಮಾಡಿದ್ದೇ ಆದಲ್ಲಿ ನಾನು ನನ್ನ ಅರ್ಧ ಮೀಸೆ ತೆಗೆಸಿ ಅಂಗಳಕ್ಕೆ ಬಂದು ಆಡುತ್ತೇನೆ. ಇದು ನನ್ನ ಓಪನ್​ ಚಾಲೆಂಜ್​ ಎಂದು ಪೂಜಾರಾಗೆ ಅಶ್ವಿನ್ ಸವಾಲು ನೀಡಿದ್ದಾರೆ

ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಪೂಜಾರ ಸ್ಪಿನ್​​ ಬೌಲಿಂಗ್​​ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದ್ರೆ ಇಲ್ಲಿ ನೋಡಿದ್ರೆ ಕೇರಂ ಸ್ಪಿನ್ನರ್​​​ ಅಶ್ವಿನ್​​, ಪೂಜಾರಾಗೆ ಸವಾಲು ಹಾಕಿದ್ದಾರೆ.