ಆಷಾಢ ಶುಕ್ರವಾರದ ಸಂಭ್ರಮಕ್ಕೆ ಚಾಮುಂಡಿ ಬೆಟ್ಟದಲ್ಲಿ ಸಿದ್ದತೆ: ಅದ್ದೂರಿ ಆಚರಣೆಗೆ ಸಜ್ಜಾದ ಜಿಲ್ಲಾಡಳಿತ.

kannada t-shirts

ಮೈಸೂರು,ಜೂನ್,30,2022(www.justkannada.in): ಕೊರೊನಾ ಕಪಿಮುಷ್ಠಿಗೆ ಸಿಲುಕಿ ಎರಡು ವರ್ಷ ಸರಳ ಹಾಗೂ ಸಂಪ್ರದಾಯ ಆಚರಣೆಗೆ ಮಾತ್ರ ಸೀಮಿತವಾಗಿದ್ದ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿನ ಆಷಾಢ ಪೂಜೆ ಈ ಬಾರಿ ಅದ್ಧೂರಿಯಾಗಿ ನಡೆಯಲಿದೆ.

ನಾಳೆ  ಮೊದಲ ಆಷಾಢ ಶುಕ್ರವಾರವಾಗಿದ್ದು, ಚಾಮುಂಡಿ ಬೆಟ್ಟದಲ್ಲಿ ಸಿದ್ಧತೆಗಳು ನಡೆಯುತ್ತಿದೆ. ಕೊರೋನಾ ನಿಯಂತ್ರಣದಲ್ಲಿರುವ ಹಿನ್ನೆಲೆಯಲ್ಲಿ ಎರಡು ವರ್ಷಗಳ ನಂತರ ಅದ್ದೂರಿ ಆಚರಣೆಗೆ ಮೈಸೂರು ಜಿಲ್ಲಾಡಳಿತ ಸಜ್ಜಾಗಿದೆ. ಆಷಾಢ ಶುಕ್ರವಾರದಲ್ಲಿ ನಾಡದೇವತೆ ಚಾಮುಂಡಿಗೆ ವಿಶೇಷ ಪೂಜೆ ಪುರಸ್ಕಾರ ನೆರವೇರಲಿದೆ.

ದೇವಾಲಯದ ಆವರಣ ಸ್ವಚ್ಛ ಮಾಡಲಾಗುತ್ತಿದ್ದು,  ಹೂವುಗಳ ಅಲಂಕಾರಕ್ಕಾಗಿ ಕಂಬಿಗಳ ಬೇಲಿ ಅಳವಡಿಸಲಾಗುತ್ತಿದೆ. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬರುವ ಕಾರಣ ಸರದಿ ಸಾಲಿನಲ್ಲಿ ದೇವಿಯ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗುತ್ತಿದೆ. ಕೊರೊನಾ ಮುಂಜಾಗ್ರತೆ ಕ್ರಮ ವಹಿಸುವಂತೆ ಈಗಿನಿಂದಲೇ ಭಕ್ತರಿಗೆ ಮೈಕ್ ಮೂಲಕ ಮುನ್ನೆಚ್ಚರಿಕೆ ಸೂಚನೆ ನೀಡಲಾಗಿದ್ದು, ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ವಾಹನ ವ್ಯವಸ್ಥೆ ಮಾಡಲಾಗಿದೆ.

ಇನ್ನು ಈಗಾಗಲೇ ಚಾಮುಂಡಿ ಬೆಟ್ಟಕ್ಕೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿ ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದು ಭಕ್ತರು ತೆರಳಲು ಬಸ್ ವ್ಯವಸ್ಥೆ ಮಾಡಲಾಗಿದೆ.

Key words: ashada- Friday -celebrations –mysore-Chamundi Hill.

website developers in mysore