ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾಳೆ ಆಶಾ ಕಾರ್ಯಕರ್ತೆಯರ ಧರಣಿ…

Promotion

ಬೆಂಗಳೂರು,ಜೂ,29,2020(www.justkannada.in):   ಪ್ರಮುಖ ಎರಡು ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಆಶಾಕಾರ್ಯಕರ್ತೆಯರು ನಾಳೆ ಧರಣಿ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಗೌರವ ಧನ ಸರಿಯಾಗಿ ನೀಡುತ್ತಿಲ್ಲ. ಕೊರೋನಾ ವಾರಿಯರ್ಸ್ ಗೆ ಸರಿಯಾದ ಸುರಕ್ಷಾ ಸಾಮಾಗ್ರಿಗಳನ್ನ ಕೊಡಲಾಗುತ್ತಿಲ್ಲ. ಹೀಗಾಗಿ ತಕ್ಷಣವೇ ಈ ಎರಡು ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ನಾಳೆ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.asha-workers-tomorrow-demand-protest

ಇನ್ನು ನಾಳೆ ಪ್ರತಿಭಟನೆಗೆ ಸರ್ಕಾರ ಅನುಮತಿ ನೀಡದಿದ್ದರೇ ಜುಲೈ 10 ರಂದು ಆಶಾಕಾರ್ಯಕರ್ತೆಯರು ಕರ್ತವ್ಯಕ್ಕೆ ಗೈರಾಗುವ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

Key words: ASHA workers- tomorrow -demand -protest