ನವದೆಹಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಜೇಟ್ಲಿ ಪಾರ್ಥೀವ ಶರೀರ: ಇಂದು ಮಧ್ಯಾಹ್ನ ಅಂತ್ಯಕ್ರಿಯೆ

Promotion

ಹೊಸದಿಲ್ಲಿ, ಆಗಸ್ಟ್ 25, 2019 (www.justkannada.in): ನಿನ್ನೆ ನಿಧನರಾದ ಮಾಜಿ ಕೇಂದ್ರ ಸಚಿವ, ಬಿಜೆಪಿಯ ಹಿರಿಯ ನಾಯಕ ಅರುಣ್ ಜೇಟ್ಲಿ(66 ವರ್ಷ)ಪಾರ್ಥಿವ ಶರೀರವನ್ನು ದಿಲ್ಲಿ ನಿವಾಸದಿಂದ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಇರಿಸಲಾಗಿದೆ.

ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬೆಳಗ್ಗೆ ಮಧ್ಯಾಹ್ನ 1:00ರ ತನಕ ಕಾರ್ಯಕರ್ತರ, ಹಿತೈಷಿಗಳ ಅಂತಿಮ ದರ್ಶನಕ್ಕಾಗಿ ಜೇಟ್ಲಿ ಪಾರ್ಥಿವ ಶರೀರ ಇಡಲಾಗುವುದು.

ಬಳಿಕ ಮೃತದೇಹವನ್ನು ಮೆರವಣಿಗೆಯ ಮೂಲಕ ದಿಲ್ಲಿಯ ನಿಗಮ್ ಬೋಧ್ ಘಾಟ್ಗೆ ಸಾಗಿಸಿ ಮಧ್ಯಾಹ್ನ 2:30ರ ಸುಮಾರಿಗೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.