ಸುತ್ತಿಗೆ ಮತ್ತು ಉಳಿ ಚಿತ್ರ ಹಂಚಿಕೊಂಡ ಅರುಣ್‌ ಯೋಗಿರಾಜ್‌ !

Promotion

ಮೈಸೂರು, ಫೆ.೧೦, ೨೦೨೪ : ಅರುಣ್‌  ಯೋಗಿರಾಜ್ ಅವರು ಅಯೋಧ್ಯೆ ದೇವಸ್ಥಾನದ ‘ಗರ್ಭ ಗುಡಿ’ ಯಲ್ಲಿನ   ಬಾಲರಾಮ ವಿಗ್ರಹವನ್ನು ಕೆತ್ತಲು ಬಳಸಿದ ವಿಶೇಷ ಉಪಕರಣಗಳ ಚಿತ್ರವನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ.

ಪ್ರತಿಮೆಯ “ದೈವಿಕ ಕಣ್ಣುಗಳನ್ನು ಕೆತ್ತಲು” ಬಳಸಿದ ಸುತ್ತಿಗೆ ಮತ್ತು ಉಳಿ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

“ಈ ಬೆಳ್ಳಿಯ ಸುತ್ತಿಗೆ ಮತ್ತು  ಚಿನ್ನದ ಉಳಿ ಬಳಸಿಕೊಂಡು ನಾನು  ಅಯೋದ್ಯೆಯ ಬಾಲರಾಮ ಮೂರ್ತಿಯ ದಿವ್ಯ ಕಣ್ಣುಗಳನ್ನು ( Netronmilana)) ಕೆತ್ತಿದ್ದೇನೆ ” ಎಂದು ಯೋಗಿರಾಜ್ ಅವರು ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

ಅಂಗೈಯ ಮೇಲೆ ಬೆಳ್ಳಿಯ ಸುತ್ತಿಗೆ ಇರಿಸಲಾಗಿದ್ದು ಅದರ ಪಕ್ಕದಲ್ಲಿ ತೆಳುವಾದ ಚಿನ್ನದ ಉಳಿ ಇರುವುದನ್ನು ಚಿತ್ರ ತೋರಿಸುತ್ತದೆ.

key words : arun ̲ yogiraj ̲ mysore ̲ photos ̲ balarama