ಕೆಬಿಎಲ್ ಸಿದ್ದಿ ವಿನಾಯಕ ಟ್ರಸ್ಟ್ ವತಿಯಿಂದ ಉಚಿತ ಕೃತಕ ಕಾಲು ಮತ್ತು ಗಾಲಿ ವಿತರಣೆ

Promotion

ಮೈಸೂರು,ಫೆಬ್ರವರಿ,17,2022(www.justkannada.in): ಕೆಬಿಎಲ್ ಸಿದ್ದಿ ವಿನಾಯಕ ಟ್ರಸ್ಟ್ ವತಿಯಿಂದ ಉಚಿತವಾಗಿ ಕೃತಕ ಕಾಲು ಮತ್ತು ಗಾಲಿ ಖುರ್ಚಿ ವಿತರಣಾ ಸಮಾರಂಭ ಏರ್ಪಡಿಸಲಾಗಿತ್ತು.

ಇಂದು ವಿದ್ಯಾರಣ್ಯಪುರಂನ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಯ ಫಲಾನುಭವಿಗಳಿಗೆ ಉಚಿತವಾಗಿ ಕೃತಕ ಕಾಲು ಮತ್ತು ಗಾಲಿ ವಿತರಣಾ ಸಮಾರಂಭ ಏರ್ಪಡಿಸಲಾಗಿತ್ತು.

ಕೆ.ಬಿ.ಎಲ್ ಸಿದ್ಧಿ ವಿನಾಯಕ ಟ್ರಸ್ಟ್ ಗೌರವ ಅಧ್ಯಕ್ಷ ಎಲ್.ರವಿ ಅಧ್ಯಕ್ಷತೆ ವಹಿಸಿದ್ದರು.  ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಕೆಬಿಎಲ್ ಸಿದ್ದಿ ವಿನಾಯಕ ಟ್ರಸ್ಟ್ ನ ಗೌರವ ಕಾರ್ಯದರ್ಶಿ ನಿಂಗರಾಜ್ ಗೌಡ ನಿರ್ದೇಶಕರಾದ ಎಲ್ . ಶ್ರೀಧರ್ , ಎನ್‌.ಕಿರಣ್ , ಕೆ . ಎನ್.ಸಂತೋಷ್ , ಎಂ . ಮೋಹನ್ , ಬಿ.ಎನ್‌.ಸುರೇಶ್‌ , ಕೆ . ಆರ್.ಪ್ರದೀಪ್ ಕುಮಾರ್ ಮತ್ತು ಸಿ.ಚಂದ್ರಶೇಖರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Key words: artificial leg – KBL -Siddhi Vinayaka Trust.