ಜಿಂಕೆ ಮಾಂಸ ಮಾರಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಅರೆಸ್ಟ್ …

Promotion

ಮೈಸೂರು,ಸೆಪ್ಟಂಬರ್ 22,2020(www.justkannada.in): ಜಿಂಕೆ ಮಾಂಸ ಮಾರಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.jk-logo-justkannada-logo

ಸೂಳಗೋಡು ಗ್ರಾಮದ  ಮನು ಹಾಗೂ ಆಯರಹಳ್ಳಿ ಹಾಡಿಯ ಮಂಜು ಬಂಧಿತರು. ಬಂಧಿತರು ನಾಗರಹೊಳೆ ರಾಷ್ಟ್ರೀಯ ಉದ್ಯಾನದೊಳಗೆ ಜಿಂಕೆ ಬೇಟೆಯಾಡಿ ಮಾಂಸ ಸಾಗಟ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಎಸಿಎಫ್ ಸತೀಶ್ ಮಾರ್ಗದರ್ಶನದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಆನೆ ಚೌಕೂರು ವಲಯದ ಕೆಂಬಕೊಲ್ಲಿ ಬಳಿ ಬಂಧಿಸಲಾಗಿದೆ.Arrest - two -accused -selling -deer meat-Nagarahole

ಬಂಧಿತರಿಂದ 20 ಕೆ.ಜಿ ಜಿಂಕೆ ಮಾಂಸ, ಸಿಂಗಲ್ ಬ್ಯಾರಲ್ ಗನ್ ವಶಕ್ಕೆ ಪಡೆಯಲಾಗಿದ್ದು, ದಾಳಿ ವೇಳೆ ಸೂಳಗೋಡಿನ ರಾಜು ಹಾಗೂ ಗೋಣಿಕೊಪ್ಪದ ಪೂವಯ್ಯ ಎಂಬ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಪರಾರಿ ಆದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Key words: Arrest – two -accused -selling -deer meat-Nagarahole