ನಾಲ್ವರು ಡ್ರಗ್ಸ್ ಪೆಡ್ಲರ್ ಗಳ ಬಂಧನ: ಮಾದಕ ವಸ್ತುಗಳು, ಮೊಬೈಲ್ ಫೋನ್ ವಶಕ್ಕೆ…

Promotion

ಬೆಂಗಳೂರು,ಜನವರಿ,30,2021(www.justkannada.in): ಬೆಂಗಳೂರು ನಗರ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ನೈಜೀರಿಯನ್ ಪ್ರಜೆಗಳು ಸೇರಿ ನಾಲ್ವರು ಡ್ರಗ್ಸ್ ಪೆಡ್ಲರ್ ಗಳನ್ನ ಬಂಧಿಸಿ 75 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು ನಗರ  ಸಿಸಿಬಿ ಪೊಲೀಸರು ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ ನಡೆಸುತ್ತಿದ್ದ  ಡಗ್ಸ್ ಜಾಲದ   ಮಾಹಿತಿ ಸಂಗ್ರಹಿಸಿ, ಕ್ಷಿಪ್ರ ಕಾರ್ಯಾಚರಣೆ ನಡೆಸಿ,  ಆಕ್ರಮಗಳಲ್ಲಿ ಭಾಗಿಯಾಗಿದ್ದ ಇಬ್ಬರು ನೈಜೀರಿಯನ್ ಪ್ರಜೆಗಳು ಹಾಗೂ ಇಬ್ಬರು ಹೊರ ರಾಜ್ಯದ ಡ್ರಗ್ಸ್ ಪೆಡ್ಲರ್ ಗಳನ್ನ ಬಂಧಿಸಿದ್ದಾರೆ.

ಡಿಕಟ ಆಲ್ಬರ್ಟ್ ಜ್ಯೂನಿಯರ್,(43), ಹೆಲ್ಸನ್ ಹೆನ್ರಿ ಕೊಪ್ಪಿ(34), ಜುನೈದ್(32), ಶಕೀರ್(35 ಬಂಧಿತ ಡ್ರಗ್ಸ್ ಪೆಡ್ಲರ್ ಗಳು. ಬಂಧಿತರಿಂದ  75 ಲಕ್ಷ ಬೆಲೆಯ ಮಾದಕ ವಸ್ತುಗಳು, ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ 3 ಮೊಬೈಲ್ ಫೋನ್, ಒಂದು ಮೋಟಾರ್ ಸೈಕಲ್ ವಶಕ್ಕೆ ಪಡೆದಿದ್ದಾರೆ.

ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಎಸಿಪಿ ಕೆ.ಸಿ ಗೌರತಮ್ ರವರ ನೇತೃತ್ವದಲ್ಲಿ ಪಿಐ, ಜಿ. ಲಕ್ಷ್ಮೀಕಾಂತಯ್ಯ, ಎಂಎಸ್ ಬೊಳೆತ್ತಿನ್ ಅವರು ತಂಡ ಕಾರ್ಯಾಚರಣೆ  ನಡೆಸಿ ಬಂಧಿಸಿದ್ದಾರೆ.

75 ಲಕ್ಷ ಮೌಲ್ಯದ ಮಾದಕ ವಸ್ತುಗಳಾದ 600 ಗ್ರಾಂ ಬ್ರೌನ್ ಎಂಡಿಎಂಎ 400 ಗ್ರಾಂ ವೈಟ್ ಎಂಡಿಎಂಎ, ಕ್ರಿಸ್ಟೆಲ್ಸ್ ಗಳು ಡಿಜಿಟಲ್ ವೈಯಿಂಗ್ ಮಷಿನ್. ಒಂದು ಮೋಟಾರ ಸೈಕಲ್ ಗಳನ್ನು  ವಶಕ್ಕೆ ಪಡೆದಿದ್ದಾರೆ. arrest-four -drug peddlers-Seize - mobile phones

ಈ ನೈಜೀರಿಯನ್ ಪ್ರಜೆಗಳು ಯಾವುದೇ ಪಾಸ್‌ಪೋರ್ಟ್, ವೀಸಾಗಳನ್ನು ಹೊಂದಿರದೆ, ಅಕ್ರಮವಾಗಿ ನೆಲೆಸಿರುವುದು ತನಿಖೆಯಿಂದ ತಿಳಿದು ಬಂದಿದೆ., ಇವರುಗಳ ವಿರುದ್ಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Key words: arrest-four -drug peddlers-Seize – mobile phones