ಸೈಟ್ ಕೊಡಿಸುವುದಾಗಿ ಹಣಪಡೆದು ವಂಚನೆ: ಆರೋಪಿ ಅರೆಸ್ಟ್….

Promotion

ಹುಬ್ಬಳ್ಳಿ,ಡಿ,22,2019(www.justkannada.in):  ಸೈಟ್ ಕೊಡುವುದಾಗಿ ಹಣ ಪಡೆದು ಗ್ರಾಹಕರಿಗೆ ವಂಚನೆ ಮಾಡಿದ್ದ ವ್ಯಕ್ತಿಯನ್ನ ಹುಬ್ಬಳ್ಳಿಯ ನವನಗರ ಠಾಣಾ ಪೊಲೀಸರು ಬಂಧಸಿದ್ದಾರೆ.

ನಾಗರಾಜು ಶ್ಯಾವಿ ಬಂಧಿತ ಆರೋಪಿ.  ನಾಗರಾಜು ಶ್ಯಾವಿ ನಿಸರ್ಗ ಡೆವಲಪರ್ಸ್ ಮಾಲೀಕನಾಗಿದ್ದು ಜನರಿಗೆ ಸೈಟ್ ಕೊಡುವುದಾಗಿ ಹಣ ಪಡೆದಿದ್ದ. ಸುಮಾತು 5 ರಿಂದ 8 ಲಕ್ಷ ಹಣ ಪಡೆದು ವರ್ಷಗಳಿಂದ ಸುಳ್ಳು ಹೇಳುತ್ತಿದ್ದ ಎನ್ನಲಾಗಿದೆ. ಈ ನಡುವೆ ಗ್ರಾಹಕರು ಕಚೇರಿಗೆ ತೆರಳಿ ಸೈಟ್ ನೀಡುವಂತೆ ಆಗ್ರಹಿಸಿದ್ದರು.

ಆದರೆ ಗ್ರಾಹಕರಿಗೆ ನಾಗರಾಜ್ ಚೆಕ್ ನೀಡಿ ಕಳುಹಿಸಿದ್ದನು. ನಾಗರಾಜು ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಈ ಸಂಬಂಧ ಗ್ರಾಹಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿ ನಾಗರಾಜರನ್ನ ಪೊಲೀಸರು ಬಂಧಿಸಿದ್ದಾರೆ.

Key words: Arrest – allegedly- fraud- site-hubbli