ಸೇನಾ ಹೆಲಿಕಾಪ್ಟರ್ ದುರಂತ ಪ್ರಕರಣ: ಘಟನೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮಾಜಿ ಸಚಿವ ಯುಟಿ ಖಾದರ್.

Promotion

ಮಂಗಳೂರು,ಡಿಸೆಂಬರ್,13,2021(www.justkannada.in):  ಸಿಡಿಎಸ್ ಬಿಪಿನ್ ರಾವತ್ ಇದ್ಧ ಸೇನಾ ಹೆಲಿಕಾಪ್ಟರ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ಬಗ್ಗೆ ಮಾಜಿ ಸಚಿವ ಯುಟಿ ಖಾದರ್ ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಂಗಳೂರಿನಲ್ಲಿ ಮಾತನಾಡಿದ ಯು.ಟಿ ಖಾದರ್, ಬಿಪಿನ್ ರಾವತ್ ರಾವತ್ ಹೆಲಿಕಾಪ್ಟರ್ ದುರಂತ ವಿಚಾರದಲ್ಲಿ ಗೊಂದಲವಿದೆ.  ಸುಸಜ್ಜಿತವಾದ ರಕ್ಷಣ ಪಡೆಯ ಸೇನಾ ಹೆಲಿಕಾಪ್ಟರ್ ಅಷ್ಟು ಸುಲಭವಾಗಿ ಹೇಗೆ ಪತನವಾಯಿತು.  ಬೇರೆ ದೇಶಗಳಲ್ಲಾದರೇ ರಕ್ಷಣ ಸಚಿವರು ರಾಜೀನಾಮೆ ನೀಡುತ್ತಿದ್ದರು.  ಇದು ಜನಸಾಮಾನ್ಯರ ಪ್ರಶ್ನೆ ಸರ್ಕಾರ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.Congress -not - injustice –poor-UT Khadar- outrage - food minister –Umesh katti

ಕಳೆದ ನಾಲ್ಕೈದು ದಿನಗಳ ಹಿಂದೆ ತಮಿಳುನಾಡಿನ ಊಟಿ ಬಳಿ ಕೂನೂರು ಬಳಿ ಸೇನಾ ಹೆಲಿಕಾಪ್ಟರ್ ಪತನವಾಗಿ ಸಿಡಿಎಸ್ ಬಿಪಿನ್ ರಾವತ್ ಪತ್ನಿ ಮಧುಲಿಕಾ ರಾವತ್ ಸೇರಿ 14 ಮಂದಿ ಮೃತಪಟ್ಟಿದ್ದರು.

Key words: Army –helicopter- disaster- Former minister -UT Khadar – doubts -e incident.