“ಪ್ರಾಚ್ಯವಿದ್ಯಾ ಸಂಶೋಧನಾಲಯದ ಅಭಿವೃದ್ಧಿಗೆ ದಾನಿಗಳ ಅವಶ್ಯಕತೆಯಿದೆ” : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಜನವರಿ06,2021(www.justkannada.in) : ಪ್ರಾಚ್ಯವಿದ್ಯಾ ಸಂಶೋಧನಾಲಯವು ಜ್ಞಾನನಿಧಿಯಾಗಿದ್ದು, ಇದನ್ನು ಉಳಿಸಿ, ಬೆಳೆಸುವ ಕಾರ್ಯವಾಗಬೇಕಿದೆ. ಈ ಕಾರ್ಯಕ್ಕೆ ದಾನಿಗಳ ಅವಶ್ಯಕತೆಯಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯ ಪ್ರಾಚ್ಯವಿದ್ಯಾ ಸಂಶೋಧನಾಲಯ ಮತ್ತು ಪ್ರಸಾರಾಂಗದ ಸಹಯೋಗದಲ್ಲಿ ಪ್ರಾಚ್ಯವಿದ್ಯಾ ಸಂಶೋಧನಾಲಯ ಆವರಣದಲ್ಲಿ ಆಯೋಜಿಸಿದ್ದ ‘’6 ಪುಸ್ತಕಗಳ ಲೋಕಾರ್ಪಣೆ ಹಾಗೂ ಪುಸ್ತಕಗಳ ಪ್ರದರ್ಶನ ಮತ್ತು ಶೇ.50% ರಿಯಾಯಿತಿ ದರದಲ್ಲಿ ಮಾರಾಟ’’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಾಚ್ಯವಿದ್ಯಾ ಸಂಶೋಧನಾಲಯ ಅಭಿವೃದ್ಧಿಯ ದೃಷ್ಟಿಯಿಂದ ಆಸಕ್ತರನ್ನು ಕರೆತರುವ ಹಾಗೂ ಸಹಕಾರ ನೀಡುವ ಕಾರ್ಯವಾಗಬೇಕಿದೆ. ತಾಳೆಗರಿಗಳನ್ನು ಅಧ್ಯಯನ ಮಾಡಿ ಅದನ್ನು ಮರುರಚಿಸಿ ಹೊಸ ತಲೆಮಾರುಗಳಿಗೆ ತಿಳಿಸಬೇಕಿದೆ ಎಂದರು.Archaeological-University-development-donors-Required-Chancellor-Prof.G.Hemant Kumar

ಕುಲಸಚಿವ ಪ್ರೊ.ಆರ್.ಶಿವಪ್ಪ ಮಾತನಾಡಿ, ಪ್ರಾಚ್ಯವಿದ್ಯಾ ಸಂಶೋಧನಾಲಯದ ಪುಸ್ತಕಗಳ ಪ್ರಕಟಣೆಯ ಹಿಂದೆ ಅನೇಕರ ಶ್ರಮವಿದೆ. ಹಿಂದೆ ಇದ್ದಂತಹ ವಿದ್ವತ್ ಉಳ್ಳವರು ಇಂದು ಕಡಿಮೆ. ಹಿರಿಯರು ನಮಗೆ ಚಿನ್ನ, ಬಂಗಾರ, ಆಸ್ತಿ ಬಿಟ್ಟು ಹೋಗಿದ್ದಾರೆ ಎಂದು ನೋಡುವುದಕ್ಕಿಂತ ಜ್ಞಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೀಡಿರುವ ಕೃತಿಗಳು ಮಹತ್ವದ್ದಾಗಿವೆ ಎಂದು ಹೇಳಿದರು.

ಪ್ರಾಚ್ಯವಿದ್ಯಾ ಸಂಶೋಧನಾಲಯವು ಜ್ಞಾನ ಕಣಜವಾಗಿದ್ದು, ಈ ಕೃತಿಗಳಲ್ಲಿರುವ ಜ್ಞಾನವನ್ನು ಬೆಳಕಿಗೆ ತರುವ ಕಾರ್ಯವಾಗಬೇಕಿದೆ. ಈ ವರ್ಷ 12 ಪುಸ್ತಕಗಳು ಬಿಡುಗಡೆಯಾಗಿದ್ದು, ಈ ಸಂಖ್ಯೆ ಮತ್ತಷ್ಟು ಹೆಚ್ಚಲಿ ಎಂದು ಆಶಿಸಿದರು.Archaeological-University-development-donors-Required-Chancellor-Prof.G.Hemant Kumarಕಾರ್ಯಕ್ರಮದಲ್ಲಿ ಡಾ.ಎಸ್.ಶಿವರಾಜಪ್ಪ ಅವರ ಕವಿಜನ ಕಾಮಧೇನು ಮುಮ್ಮಡಿ ಕೃಷ್ಣರಾಜ ಒಡೆಯರ್, ಡಾ.ಸಿ.ಪಾರ್ವತಿ ಅವರ ಸಿದ್ದಸಿದ್ಧಾಂತ ಪದ್ಧತಿ, ಡಾ.ಎಂ.ಗೀತಾ ಅವರ ಅಶ್ವಲಕ್ಷಣಮ್, ಜಿ.ಎನ್.ಸಿದ್ದಲಿಂಗಪ್ಪ ಅವರ ಪ್ರೊ.ಎಚ್.ದೇವಿರಪ್ಪ ಬದುಕು-ಬರಹ, ಎಸ್.ಸಿ.ಶೋಭಾ ಅವರ ಶ್ರೀಚಾಮುಂಡಿಕಾ ಲಘುನಿಘಂಟು, ಡಾ.ದಿದ್ದಿಗಿ ವಂಶಿ ಕೃಷ್ಣ ಅವರ ಸೂರ್ಯಚಂದ್ರವಂಶಾನುಚರಿತ್ಮ ಸೇರಿದಂತೆ ಒಟ್ಟು 6 ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಪುಸ್ತಕ ಪ್ರದರ್ಶನ
ದೇಜಗೌ ಅವರ ಕುವೆಂಪು ಸಾಹಿತ್ಯ ವಿಲೋಕನ, ಪ್ರೊ.ನೀಲಗಿರಿ ತಳವಾರ ಅವರ ನಿಧಿ-ನಿಕ್ಷೇಪ, ಡಾ.ತೀ.ನಂ.ಶಂಕರನಾರಾಯಣ ಅವರ ಕಾಡುಗೊಲ್ಲರ ಸಂಪ್ರದಾಯಗಳು ಮತ್ತು ನಂಬಿಕೆಗಳು, ಡಾ.ಡಿ.ಕೆ.ರಾಜೇಂದ್ರ ಅವರ ಕುವೆಂಪು ಆಯ್ದ ಕವನಗಳ ತೌಲನಿಕ ವಿಮರ್ಶೇ, ಎಚ್.ಎಲ್.ನಾಗೇಗೌಡ ಅವರ ಪ್ರವಾಸಿ ಖಂಡ ಇಂಡಿಯಾ …. ಹೀಗೆ ಸುಮಾರು 200ಕ್ಕೂ ಹೆಚ್ಚು ಕೃತಿಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿತ್ತು.Archaeological-University-development-donors-Required-Chancellor-Prof.G.Hemant Kumar

ಈ ಸಂದರ್ಭ ಪ್ರಸಾರಾಂಗ ನಿರ್ದೇಶಕ ಪ್ರೊ.ಎನ್.ಎಂ.ತಳವಾರ, ಪ್ರಾ.ವಿ.ಸಂ.ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ, ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜೇಗೌಡ ಇತರರು ಉಪಸ್ಥಿತರಿದ್ದರು.

ENGLISH SUMMARY…..

Archaeological Research Centre needs donors for development: Prof. G. Hemanth Kumar
Mysuru, Jan. 06, 2021 (www.justkannada.in): “The Archaeological Research Centre is a hub of knowledge and information. There is a need of preserving and developing it and hence we need donors,” opined Prof. G. Hemanth Kumar, Vice-Chancellor, University of Mysore.
“There is a need to study the manuscripts that are in the centre and recreate them and preserve for the future generations,” he said.Archaeological-University-development-donors-Required-Chancellor-Prof.G.Hemant Kumar
Prof. R. Shivappa explained that there are contribution and efforts of many people behind the book collection of the centre. “In older days there were many people with deep knowledge, but unfortunately not many of them have that much knowledge. Instead of looking at the valuables that our elders have left behind for us, it is essential for us to look at the knowledge that we have to inherit,” he added.
Keywords: Archaeological Research Centre/ donors required/ University of Mysore

key words : Archaeological-University-development-donors-Required-
Chancellor-Prof.G.Hemant Kumar