ಅ.9ರಂದು ಅಪ್ಪು ಗಂಧದ ಗುಡಿ ಟೀಸರ್ ರಿಲೀಸ್ !

ಬೆಂಗಳೂರು, ಅಕ್ಟೋಬರ್ 07, 2022 (www.justkannada.in): ಪುನೀತ್ ರಾಜ್​ಕುಮಾರ್ ಅವರ ಗಂಧದ ಗುಡಿ ಡಾಕ್ಯುಮೆಂಟರಿ ಚಿತ್ರದ ಟೀಜರ್ ಅ.9ರಂದು ರಿಲೀಸ್ ಆಗಲಿದೆ.

ಅಕ್ಟೋಬರ್ 9ರಂದು ಬೆಳಗ್ಗೆ 10:19ಕ್ಕೆ ಪಿಆರ್​ಕೆ ಆಡಿಯೋ ಯೂಟ್ಯೂಬ್​ ಚಾನೆಲ್​ನಲ್ಲಿ ‘ಗಂಧದಗುಡಿ’ಯ ಟ್ರೇಲರ್ ರಿಲೀಸ್ ಆಗಲಿದೆ.

ಪುನೀತ್​ ರಾಜ್​ಕುಮಾರ್ ಅವರ ಕನಸಿನ ಪ್ರಾಜೆಕ್ಟ್ ಆಗಿತ್ತು. ಇದನ್ನು ಜನರ ಮುಂದಿಡುವ ಮೊದಲೇ ಪುನೀತ್ ಅವರು ಇಹಲೋಕ ತ್ಯಜಿಸಿದರು.

ಇದೀಗ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಈ ಸಾಕ್ಷ್ಯಚಿತ್ರವನ್ನು ಜನರ ಮುಂದೆ ಇಡುತ್ತಿದ್ದಾರೆ. ಅಕ್ಟೋಬರ್ 29ರಂದು ಪುನೀತ್ ನಿಧನ ಹೊಂದಿ ಒಂದು ವರ್ಷ ಆಗಲಿದೆ. ಅದಕ್ಕೂ ಒಂದು ದಿನ ಮೊದಲು ಅಂದರೆ ಅಕ್ಟೋಬರ್ 28ರಂದು ಈ ಡಾಕ್ಯುಮೆಂಟರಿ ಥಿಯೇಟರ್​​ನಲ್ಲೇ ರಿಲೀಸ್ ಆಗಲಿದೆ.